ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಧೋನಿ ಪಡೆ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ ನಷ್ಟಕ್ಕೆ 167ರನ್ಗಳಿಕೆ ಮಾಡಿದೆ.
ಸಂಘಟಿತ ಬ್ಯಾಟಿಂಗ್ ಪ್ರದರ್ಶನ: ಹೈದರಾಬಾದ್ ಗೆಲುವಿಗೆ 168 ರನ್ ಟಾರ್ಗೆಟ್ ನೀಡಿದ ಸಿಎಸ್ಕೆ! - ಇಂಡಿಯನ್ ಪ್ರೀಮಿಯರ್ ಲೀಗ್ ಸುದ್ದಿ
ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಸೆಣಸಾಟ ನಡೆಯುತ್ತಿದೆ.
Chennai Super Kings news
ವ್ಯಾಟ್ಸನ್ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿದ ಸ್ಯಾಮ್ ಕರ್ರನ್ 21 ಎಸೆತಗಳಲ್ಲಿ 31ರನ್ಗಳಿಕೆ ಮಾಡಿದ್ರೆ, ಮತ್ತೋರ್ವ ಆಟಗಾರ ಡುಪ್ಲೆಸಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕಿಳಿದ ವ್ಯಾಟ್ಸನ್ 38 ಎಸೆತಗಳಲ್ಲಿ 42 ರನ್ಗಳಿಕೆ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ರಾಯುಡು(41)ರನ್, ಧೋನಿ(21), ಜಡೇಜಾ ಅಜೇಯ(25)ರನ್ಗಳಿಕೆ ಮಾಡಿ ತಂಡ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 167ರನ್ಗಳಿಕೆ ಮಾಡುವಂತೆ ಮಾಡಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ, ಖಲೀಲ್ ಅಹ್ಮದ್ ಹಾಗೂ ನಟರಾಜನ್ ತಲಾ ಎರಡು ವಿಕೆಟ್ ಪಡೆದುಕೊಂಡು ಮಿಂಚಿದರು.