ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಮಹಿಳಾ ಕ್ರಿಕೆಟ್​ ಆಟಗಾರ್ತಿಯರಿಗೆ ಹೊಸ ಒಪ್ಪಂದ ಬಿಡುಗಡೆ

ಸಾಧನೆ, ಲಭ್ಯತೆ ಮತ್ತು ಭವಿಷ್ಯದ ಅವಶ್ಯಕತೆಗಳ ಆಧಾರದ ಮೇಲೆ ಗುತ್ತಿಗೆ ಪಡೆದ ಆಟಗಾರರನ್ನು ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿಯು ನಾಮಕರಣ ಮಾಡಿದೆ.

By

Published : Jun 10, 2020, 8:33 AM IST

ಶ್ರೀಲಂಕಾ ಕ್ರಿಕೆಟ್ ಮಂಡಳಿ
ಶ್ರೀಲಂಕಾ ಕ್ರಿಕೆಟ್ ಮಂಡಳಿ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಂಗಳವಾರ 20 ರಾಷ್ಟ್ರೀಯ ಮತ್ತು 15 ಉದಯೋನ್ಮುಖ ಮಹಿಳಾ ಕ್ರಿಕೆಟ್​ ಆಟಗಾರ್ತಿಯರಿಗೆ ಆರು ತಿಂಗಳ ಹೊಸ ಒಪ್ಪಂದ ಪ್ರಕಟಿಸಿದೆ. 2020 ರಲ್ಲಿ ಉನ್ನತ ಒಪ್ಪಂದ ಪಡೆದ ಏಕೈಕ ಆಟಗಾರ್ತಿಯಾಗಿ ಚಾಮರಿ ಅಟಪಟ್ಟು ಆಯ್ಕೆಯಾಗಿದ್ದಾರೆ.

ಚಾಮರಿ ಅಟಪಟ್ಟು

ಈ ಒಪ್ಪಂದ ಮೇ 1 ರಿಂದ ಜಾರಿಗೆ ಬರಲಿದೆ ಎಂದು ಎಸ್‌ಎಲ್‌ಸಿ ತಿಳಿಸಿದೆ. ರಾಷ್ಟ್ರೀಯ ಮಹಿಳಾ ಕ್ರಿಕೆಟಿಗರಿಗೆ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ವಿಭಾಗಗಳ ಅಡಿ ಒಪ್ಪಂದಗಳನ್ನು ನೀಡಲಾಯಿತು.

ಮತ್ತೊಂದೆಡೆ, ಉದಯೋನ್ಮುಖ ಮಹಿಳಾ ಕ್ರಿಕೆಟಿಗರಿಗೆ ನಿಗದಿತ ಮಾಸಿಕ ದರ ಮತ್ತು ಹಾಜರಾತಿ ಭತ್ಯೆಯನ್ನು ನೀಡಲಾಯಿತು.

ಸಾಧನೆ, ಲಭ್ಯತೆ ಮತ್ತು ಭವಿಷ್ಯದ ಅವಶ್ಯಕತೆಗಳ ಆಧಾರದ ಮೇಲೆ ಗುತ್ತಿಗೆ ಪಡೆದ ಆಟಗಾರರನ್ನು ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿಯು ನಾಮಕರಣ ಮಾಡಿದೆ.

ಗ್ರೂಪ್ ಎ ಯಲ್ಲಿ ಚಾಮರಿ ಅಟಪಟ್ಟು ಒಬ್ಬರೆ ಕಾಣಿಸಿಕೊಂಡಿದ್ದಾರೆ. ಗ್ರೂಪ್​ ಬಿ ಯಲ್ಲಿ ಅನುಷ್ಕಾ ಸಂಜೀವನಿ, ಒಶಾದಿ ರಣಸಿಂಘೆ, ಇನೋಕಾ ರಣವೀರ, ನೀಲಕ್ಷಿ ಡಿಸಿಲ್ವಾ, ಸುಗಂದಿಕಾ ಕುಮಾರಿ, ಉದೇಶಿಕಾ ಪ್ರಬೋಧನಿ, ಹಾಸಿನಿ ಪೆರೆರ ಮತ್ತು ಹರ್ಷಿತಾ ಮಾಧವಿ ಇದ್ದಾರೆ.

ಗ್ರೂಪ್ ಸಿ ಗುಂಪಿನಲ್ಲಿ ದಿಲಾನಿ ಮನೋದರಾ, ಪ್ರಸಾದಿನಿ ವೀರಕೋಡಿ ಮತ್ತು ಕವಿಶಾ ದಿಲ್ಹಾರಿ ಸೇರಿದ್ದಾರೆ. ಗ್ರೂಪ್ ಡಿ ಯಲ್ಲಿ ಅಮಾ ಕಾಂಚನಾ, ಇಮಾಲ್ಕಾ ಮೆಂಡಿಸ್, ಇನೋಸಿ ಫರ್ನಾಂಡೊ, ಅಚಿನಿ ಕುಲಸೂರ್ಯಾ, ಹನ್ಸಿಮಾ ಕರುಣರತ್ನ, ಮಧುಶಿಕಾ ಮೆಥಾನಂದ, ಉಮೇಶಾ ತಿಮಾಶಿನಿ ಮತ್ತು ಸತ್ಯ ಸಂದೀಪಣಿ ಇದ್ದಾರೆ.

ಗುತ್ತಿಗೆ ಪಡೆದ ಉದಯೋನ್ಮುಖ ಮಹಿಳಾ ಆಟಗಾರ್ತಿಯರು:ಮಾಲ್ಷಾ ಶೆಹಾನಿ, ಲಿಹಿನಿ ಅಪ್ಸರಾ, ತಾರಿಕಾ ಸೆವಾಂಡಿ, ಜಿಮಾಂಜಲೀ ವಿಜೇನಾಯಕೆ, ಹರ್ಷನಿ ವಿಜೆರತ್ನೆ, ಶಶಿಕಲಾ ಸಿಲ್ವಾ, ಸಚಿನಿ ನಿಸಾನ್ಸಲಾ, ಇರೆಷಾ ಸಂದಮಾಲೀ, ತರುಕಾ ಶೆಹಾನಿ, ನೀಲಕಾಶಾನಾ ಸಾಂದಮಿ ಸಲಾಮಿ, ರೋಸ್ ಪೆರೆರಾ.

ABOUT THE AUTHOR

...view details