ಭಾರತ ತಂಡದ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್, ಇಂದು ನಡೆದ ನ್ಯೂಜಿಲ್ಯಾಂಡ್-ಭಾರತ ಪಂದ್ಯದ ಪಂದ್ಯ ಶ್ರೇಷ್ಠ ಶ್ರೇಯಸ್ ಅಯ್ಯರ್ ಅವರನ್ನು ಸಂದರ್ಶಿಸಿದ್ದಾರೆ.
ನಮ್ಮ ತಂಡದ ಹೀರೋ ಶ್ರೇಯಸ್ ಅಯ್ಯರ್ ನಿಮ್ಮ ಬ್ಯಾಟಿಂಗ್ ಅತ್ಯದ್ಭುತ. 204 ರನ್ಗಳ ಚೇಸಿಂಗ್ ಇತ್ತು. ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ ಅವರೆಲ್ಲ ಔಟ್ ಆಗಿದ್ದರು, ನಿಮ್ಮ ಪಾರ್ಟ್ನರ್ ಮನಿಷ್ ಇದ್ದರು. ಆ ಸಮಯದಲ್ಲಿ ನಿಮ್ಮ ತಲೆಯಲ್ಲಿ ಏನು ಓಡುತ್ತಿತ್ತು ಎಂದು ಚಹಲ್ ಶ್ರಯಸ್ಗೆ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಶ್ರೇಯಸ್ ನನಗೆ ಆ ಸಂದರ್ಭದಲ್ಲಿ ಒಬ್ಬ ಉತ್ತಮ ಪಾರ್ಟ್ನರ್ ಬೇಕು ಎಂದನಿಸಿತು. ಗ್ರೌಂಡ್ ಕೂಡ ಚಿಕ್ಕದಿತ್ತು. ಓವರ್ನಲ್ಲಿ 1 ಬೌಂಡ್ರಿ ಹೊಡೆಯಬೇಕು ಎಂದು ನಾವು ನಿರ್ಧರಿಸಿದೆವು. ಇದರಿಂದ ಬೌಲರ್ಗೆ ಒತ್ತಡ ಹೆಚ್ಚುತ್ತೆ. ಇಲ್ಲಿ ಪಾರ್ಟ್ನರ್ಶಿಪ್ ತುಂಬಾ ಮುಖ್ಯವಾಗಿತ್ತು ಎಂದು ಶ್ರೇಯಸ್ ಅಯ್ಯರ್ ಅಭಿಪ್ರಾಯ ಹಂಚಿಕೊಂಡರು.