ಕರ್ನಾಟಕ

karnataka

ETV Bharat / sports

ಮಧ್ಯಮ ಓವರ್‌ಗಳಲ್ಲಿ ಕೊಹ್ಲಿಗೆ 'ಕುಲ್‌-ಚ' ಸ್ಪಿನ್‌ ಸ್ಪಿನ್‌ ಅಸ್ತ್ರ.. ಪಾಕ್‌ ವಿರುದ್ಧವೂ ಇದೇ ತಂತ್ರ ಪ್ರಯೋಗ!

ಟೀಂ ಇಂಡಿಯಾ ಬಳಿ ಬೌಲಿಂಗ್ ವಿಭಾಗದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಲು ಚೈನಾಮ್ಯಾನ್​ ಖ್ಯಾತಿಯ ಕುಲ್‌ದೀಪ್‌ ಯಾದವ್ ಹಾಗೂ ಯಜುವೇಂದ್ರ ಚಹಾಲ್​ ಇದ್ದು, ವಿಶ್ವಕಪ್​​ನಲ್ಲಿ ಈ ಜೋಡಿ ಕಮಾಲ್​ ಮಾಡ್ತಿದೆ.

By

Published : Jun 19, 2019, 4:20 PM IST

Updated : Jun 19, 2019, 4:31 PM IST

ಟೀಂ ಇಂಡಿಯಾ

ಲಂಡನ್​​: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಸೋಲು ಕಂಡ ಬಳಿಕ ಟೀಂ ಇಂಡಿಯಾ ಬೌಲಿಂಗ್​ ವಿಭಾಗ ಸಿಕ್ಕಾಪಟ್ಟೆ ಟೀಕೆಗೊಳಗಾಗಿತ್ತು. ಇದಾದ ಬಳಿಕ ಫಿನಿಕ್ಸ್​​ ಪಕ್ಷಿಯಂತೆ ಪುಟಿದೆದ್ದು, ಟೀಂ ಇಂಡಿಯಾ ಬೌಲಿಂಗ್​ ವಿಭಾಗ ಅಬ್ಬರಿಸುತ್ತಿದೆ.

ಬುಮ್ರಾ,ಚಹಲ್​​

ಈ ಹಿಂದೆ ಲಂಡನ್​​ನಲ್ಲಿ ನಡೆದಿದ್ದ ಚಾಂಪಿಯನ್ಸ್‌​ ಟ್ರೋಫಿಯಲ್ಲಿ ಮಧ್ಯಮ ಕ್ರಮಾಂಕದ ಬೌಲರ್​ಗಳು ವಿಕೆಟ್​ ಪಡೆದುಕೊಳ್ಳಲು ಪರದಾಡಿದ್ದರಿಂದ ಭಾರತ ಹೀನಾಯ ಸೋಲು ಕಂಡಿತ್ತು. ಅದಾದ ಬಳಿಕ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​​ ಯಜುವೇಂದ್ರ ಚಹಲ್​ ಹಾಗೂ ಕುಲ್‌ದೀಪ್‌ ಯಾದವ್​ಗೆ ಪ್ರತಿ ಪಂದ್ಯದಲ್ಲೂ ಆಡುವ 11ರ ಬಳಗದಲ್ಲಿ ಚಾನ್ಸ್​ ನೀಡುತ್ತಿದೆ. ಈ ಜೋಡಿ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​ ಸೇರಿದಂತೆ ವಿವಿಧ ತಂಡಗಳ ವಿರುದ್ಧ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದೆ.

ಕುಲ್ದೀಪ್​​-ಚಹಲ್​ ಏಕದಿನ ಸಾಧನೆ

ಪಂದ್ಯ ವಿಕೆಟ್​​ ಸರಾಸರಿ ಅತ್ಯುತ್ತಮ 4ವಿಕೆಟ್​​ 5ವಿಕೆಟ್​​ ಸ್ಟ್ರೈಕ್​​ ರೇಟ್​ ಎಕಾನಮಿ
ಯಾದವ್​ 31 63 21.14 6/25 4 1 25.7 4.93
ಚಹಲ್​​ 31 49 28.32 5/22 2 1 32.9 5.15

ಕಳೆದ ಎರಡು ವರ್ಷಗಳಲ್ಲಿ ಕುಲ್ದೀಪ್​ ಸಾಧನೆ

2018 19 45 17.77 6/25 2 01 22.09 4.64
2019 14 23 29.56 4/39 2 0 33.01 5.35

ಕಳೆದ ಎರಡು ವರ್ಷಗಳಲ್ಲಿ ಚಹಲ್​​ ಸಾಧನೆ

2018 17 29 26.00 5/22 1 1 32.03 4.82
2019 10 22 23.04 6/24 1 1 24.00 5.76

ಇನ್ನು ಪಾಕ್​ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲೂ ಈ ಜೋಡಿಯ ಬೌಲಿಂಗ್​ ಮುಂದೆ ಪಾಕ್​ ಹರಸಾಹಸ ಪಡುವಂತಾಯಿತು. ಚಹಲ್​ ಯಾವುದೇ ವಿಕೆಟ್​ ಪಡೆದುಕೊಳ್ಳದಿದ್ದರೂ, ಕುಲ್​ದೀಪ್​ಗೆ ಉತ್ತಮ ಸಾಥ್​ ನೀಡಿದ್ದರಿಂದ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಲು ಸಾಧ್ಯವಾಯಿತು.

ಯಜುವೇಂದ್ರ ಚಹಲ್​​

ಟೀಂ ಇಂಡಿಯಾ ನೀಡಿದ್ದ 336ರನ್​ಗಳ ಗುರಿ ಬೆನ್ನತ್ತಿದ್ದ ಪಾಕ್​ ಆರಂಭದಲ್ಲೇ ಆಘಾತ ಅನುಭವಿಸಿದ್ದರೂ, ಫಖಾರ್​ ಜಮಾನ್(62)​ ಹಾಗೂ ಬಾಬರ್​ ಅಜಂ(48) ಜೋಡಿ ಅದ್ಭುತವಾಗಿ ಆಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು.

ಟೀಂ ಇಂಡಿಯಾ ಸಂಭ್ರಮ

ಈ ವೇಳೆ ದಾಳಿಗಿಳಿದಿದ್ದ ಚೈನಾಮ್ಯಾನ್​ ಖ್ಯಾತಿಯ ಕುಲ್‌ದೀಪ್​​ ಇವರಿಬ್ಬರಿಗೂ ಪೆವಿಲಿಯನ್​ ಹಾದಿ ತೋರಿಸಿ, ತಂಡಕ್ಕೆ ಮೆಲುಗೈ ತಂದುಕೊಟ್ಟರು. ಇದಾದ ಬಳಿಕ ಹಾರ್ದಿಕ್​ ಪಾಂಡ್ಯ ಹಾಗೂ ವಿಜಯ್​ ಶಂಕರ್​ ಪಾಕ್​​ ವಿಕೆಟ್​ ಪಡೆದು ಟೀಂ ಇಂಡಿಯಾ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರುವಂತೆ ಮಾಡಿದ್ದರು. ಒಟ್ಟಿನಲ್ಲಿ ಟೀಂ ಇಂಡಿಯಾ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಲು ಚಹಲ್​, ಕುಲ್‌ದೀಪ್​ ಕೊಡುಗೆ ಸಹ ಬಹಳಷ್ಟಿದೆ ಎಂದರೆ ಸುಳ್ಳಲ್ಲ.

Last Updated : Jun 19, 2019, 4:31 PM IST

ABOUT THE AUTHOR

...view details