ಕಾರ್ಡಿಫ್:ಬಾಂಗ್ಲಾ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾಸನ್ ರಾಯ್ ಸಂಭ್ರಮಿಸುವ ಬರದಲ್ಲಿ ಅಂಪೈರ್ಗೆ ಡಿಕ್ಕಿ ಹೊಡೆದು ಬೀಳಿಸಿದ ಘಟನೆ ಜರುಗಿದೆ.
ಬಾಂಗ್ಲಾದೇಶದ ವಿರುದ್ಧ ಮೂರನೇ ಪಂದ್ಯವಾಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ರಾಯ್ ಹಾಗೂ ಬೈರ್ಸ್ಟೋವ್ ಮೊದಲ ವಿಕೆಟ್ಗೆ 128 ರನ್ಗಳ ಜೊತೆಯಾಟ ನೀಡಿದ್ದರು. 92ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಯ್ ತಮ್ಮ 9ನೇ ಶತಕ ಗಳಿಸಿದರು.
ಶತಕ ಸಿಡಿಸಿದ ಸಂಭ್ರಮವನ್ನು ಆಚರಿಸುವ ಮೊದಲೇ ನಾನ್ ಸ್ಟ್ರೈಕರ್ ಕೊನೆಯಲ್ಲಿದ್ದ ಅಂಪೈರ್ ಜಾಯೆಲ್ ವಿಲ್ಸನ್ ಅವರಿಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ. ರಾಯ್ ಶತಕವನ್ನು ಕಂಡು ಚಪ್ಪಾಳೆ ತಟ್ಟಲು ಎದ್ದ ಪೆವಿಲಿಯನ್ನಲ್ಲಿದ್ದ ತಂಡದ ಆಟಗಾರರು ರಾಯ್ಸ್ಥಿತಿಯನ್ನು ಕಂಡು ನಗೆಗಡಲಲ್ಲಿ ತೇಲಾಡಿದರು. ತಕ್ಷಣ ಅಂಪೈರ್ರನ್ನು ರಾಯ್ ಮೇಲೆತ್ತಿ ಕ್ಷಮೆ ಕೇಳಿದ್ದಾರೆ.
121 ಎಸೆತಗಳೆನ್ನೆದುರಿಸಿದ ರಾಯ್ 5 ಸಿಕ್ಸರ್ ಹಾಗೂ 14 ಬೌಂಡರಿ ಸಹಿತ 153 ರನ್ ಗಳಿಸಿ ಔಟಾದರು. ಔಟಾಗುವ ಮುನ್ನ ಅದೇ ಓವರ್ನಲ್ಲಿ ಮೆಹೆದಿ ಹಸನ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು.