ಬೆಂಗಳೂರು:ಕೆಪಿಎಲ್ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ತಂಡಕ್ಕೆ ಪ್ರಕರಣದಲ್ಲಿ ಬಳ್ಳಾರಿ ಟಸ್ಕರ್ಸ್ ಹಾಗೂ ದುಬೈ ಕ್ರಿಕೆಟ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಪಾತ್ರವಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಹೀಗಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಅರವಿಂದ್ ವೆಂಕಟೇಶ್ ರೆಡ್ಡಿಗೆ ನೋಟಿಸ್ ಜಾರಿ ಮಾಡಿ ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದ್ರೆ ಸಿಸಿಬಿಯಿಂದ ನೋಟಿಸ್ ಜಾರಿಯಾಗ್ತಿದ್ದ ಹಾಗೆಯೇ ಬಂಧನ ಭೀತಿಯಿಂದ ಅರವಿಂದ ವೆಂಕಟೇಶ್ ರೆಡ್ಡಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಎಲ್ಒಸಿ ಜಾರಿಗೊಳಿಸಿದ್ದಾರೆ.
ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಥಾರ್ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಹೀಗಾಗಿ ಕೆಪಿಎಲ್ ಹಗರಣದಲ್ಲಿ ಸಿಸಿಬಿ ಬಂಧನ ಮಾಡಿತ್ತು. ಅಶ್ರಫ್ ಅಲಿ ರೀತಿಯಲ್ಲಿ ವೆಂಕಟೇಶ್ ರೆಡ್ಡಿ ಕೂಡ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ.
ಎಲ್ಒಸಿ ಅಂದರೆ ಏನು?
ಈಗಾಗ್ಲೇ ಸಿಸಿಬಿ ಅಧಿಕಾರಿಗಳು ಕೆಪಿಎಲ್ ಹಗರಣದಲ್ಲಿ ಭಾಗಿಯಾದ ಬುಕ್ಕಿಗಳು ವಿದೇಶಕ್ಕೆ ಹಾರಿದಾಗ ಒಮ್ಮೆ ಎಲ್ಒಸಿ (ಲುಕ್ ಔಟ್ ನೋಟಿಸ್) ಜಾರಿ ಮಾಡಿದ್ದರು.ಯಾವುದಾದರೂ ಆರೋಪಿ ಪರಾರಿ ಆದಾಗ ವಿಮಾನ ನಿಲ್ದಾಣಗಳಿಗೆ ಪೊಲೀಸರು ನೋಟಿಸ್ ನೀಡುತ್ತಾರೆ. ರಾಜ್ಯ ಸರ್ಕಾರದ ಅನುಮತಿ ಪಡೆದು ಈ ನೋಟಿಸ್ ಹೊರಡಿಸಲಾಗುತ್ತೆ. ಎಲ್ಒಸಿಗೆ ಒಂದು ವರ್ಷ ಅವಧಿ ಇರುತ್ತೆ. ಇಮಿಗ್ರೇಷನ್ ಸಂದರ್ಭದಲ್ಲಿ ಆರೋಪಿಯನ್ನು ಹಿಡಿಯಲು ಅನುಕೂಲವಾಗುತ್ತೆ ಎಂದು ನೋಟಿಸ್ ಹೊರಡಿಸಲಾಗುತ್ತದೆ.