ಕರ್ನಾಟಕ

karnataka

ETV Bharat / sports

ಕ್ಯಾಪ್ಟನ್​ ಓಡಿಹೋಗಲು ಸಾಧ್ಯವಿಲ್ಲ, ಉಳಿದ ಮೂರು ಪಂದ್ಯಗಳಲ್ಲಿ ಆಡುವೆ ಎಂದ ಧೋನಿ! - ಐಪಿಎಲ್​ನಿಂದ ಧೋನಿ ನಿವೃತ್ತಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಧೋನಿ ಪಡೆ ಕಳಪೆ ಪ್ರದರ್ಶನ ನೀಡಿ ನಾಕ್​ಔಟ್​ ಹಂತದಿಂದ ಹೊರಬಿದ್ದಿದೆ. ಇದೀಗ ಕೇವಲ ಮೂರು ಪಂದ್ಯಗಳಲ್ಲಿ ಚೆನ್ನೈ ಭಾಗಿಯಾಗಲಿದ್ದು, ಧೋನಿ ಆಡ್ತಾರಾ, ಇಲ್ವೋ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

MS Dhoni
MS Dhoni

By

Published : Oct 24, 2020, 8:13 PM IST

ದುಬೈ:ಇಂಡಿಯನ್​ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ 13ನೇ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಇದೇ ಮೊದಲ ಬಾರಿಗೆ ನಾಕೌಟ್​ ಹಂತದಿಂದ ಹೊರಬಿದ್ದಿದೆ.

ಧೋನಿ ನೇತೃತ್ವದಲ್ಲಿ ಆಡಿರುವ ಸಿಎಸ್​ಕೆ ತಂಡ 11 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆಲುವು ಸಾಧಿಸಿ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಧೋನಿ ಪಡೆ ಸಂಪೂರ್ಣವಾಗಿ ಮಂಕಾಗಿದ್ದು, ಧೋನಿ ಖುದ್ದಾಗಿ ರನ್​ಗಳಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಐಪಿಎಲ್​ನಿಂದಲೂ ಧೋನಿ ನಿವೃತ್ತಿ ಪಡೆದುಕೊಳ್ತಾರಾ...? ಟ್ವೀಟರ್​​ನಲ್ಲಿ ಇಂತಹದ್ದೊಂದು ಚರ್ಚೆ!

ನಿನ್ನೆ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 6 ಓವರ್​ಗಳಲ್ಲಿ 5ವಿಕೆಟ್ ಕಳೆದುಕೊಂಡು ಕೇವಲ 24ರನ್​ಗಳಿಕೆ ಮಾಡಿದ್ದು, ಐಪಿಎಲ್​ ಇತಿಹಾಸದಲ್ಲೇ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದೆ. ಇನ್ನು ಸಿಎಸ್​ಕೆ ತಂಡಕ್ಕೆ ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಧೋನಿ ಆಡುವವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಧೋನಿ ಉತ್ತರ ಇಲ್ಲಿದೆ!

ಮುಂದಿನ ವರ್ಷದ ಐಪಿಎಲ್​ಗೆ ನಾವು ಸ್ಪಷ್ಟವಾದ ಚಿತ್ರ ಹೊಂದಿರಬೇಕು. ಕ್ರಿಕೆಟರ್ಸ್​ ಪ್ರತಿಭೆ ಪ್ರದರ್ಶಿಸಲು ನಾವು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಉಳಿದಿರುವ ಮೂರು ಪಂದ್ಯಗಳಲ್ಲಿ ಕನಿಷ್ಠ ಒಂದು ವಿಶೇಷ ಇನ್ನಿಂಗ್ಸ್​ ನೋಡಲು ಸಿಗುವುದೇ ಎಂದು ನಿರೂಪಕ ಸೈಮನ್​ ಡೌಲ್​ ಕೇಳಿರುವ ಪ್ರಶ್ನೆಗೆ ನಗುಮುಖದಿಂದಲೇ ಉತ್ತರಿಸಿದ ಧೋನಿ, ಕ್ಯಾಪ್ಟನ್​ ಓಡಿಹೋಗಲು ಸಾಧ್ಯವಿಲ್ಲ. ಮುಂದಿನ ಎಲ್ಲ ಪಂದ್ಯಗಳಲ್ಲೂ ಆಡುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details