ಮುಂಬೈ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದ ಫೋಟೋವೊಂದನ್ನು ಲೈಕ್ ಮಾಡಿ ವಿವಾದಕ್ಕೀಡಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್, ಅದನ್ನು ಆನ್ಲೈನ್ ಮಾಡಿದ್ದಲ್ಲದೇ, ಕೊಹ್ಲಿ ಟ್ವೀಟ್ ಮಾಡಿದ್ದ ವಿಡಿಯೋಗೆ ಪ್ರತಿಕ್ರಿಯಿಸಿ ಯೂ ಟರ್ನ್ ಹೊಡೆದಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಆಯ್ಕೆ ಮಾಡಿದ್ದ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನ ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿತ್ತು. ಇದರಿಂದ ಕೆಲವು ಮಾಜಿ ಕ್ರಿಕೆಟಿಗರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು. ಅದೇ ಸಂದರ್ಭದಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹಾಗೂ ಯಾದವ್ ಮುಖಾಮುಖಿಯಾಗಿ ಗುರಾಯಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಇದೀಗ ಕೊಹ್ಲಿಯನ್ನು ಹಾಗೂ ಆಯ್ಕೆ ಸಮಿತಿಯನ್ನ ಗುರಿಯಾಗಿಸಿ ಮಾಡಿದ್ದ ಟ್ರೋಲ್ ಟ್ವೀಟ್ ಅನ್ನು ಸೂರ್ಯ ಲೈಕ್ ಮಾಡಿದ್ದರು. ಆದರೆ ಸೂರ್ಯರ ಈ ನಡತೆ ಖಂಡಿಸಿದ್ದರು. ನಿಮ್ಮ ಈ ವರ್ತನೆ ನಿಮ್ಮ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಕೆಲವರು ಎಚ್ಚರಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸೂರ್ಯ ಮತ್ತೆ ಆ ಟ್ವೀಟ್ ಅನ್ನು ಅನ್ಲೈಕ್ ಮಾಡಿದ್ದರು.
ಇದೀಗ ಕೊಹ್ಲಿ ಬರ ಟ್ರೋಲಿಗರು ಮಾಡಿದ್ದ ವಿಡಿಯೋಗೆ ಪ್ರತಿಕ್ರಿಯಿಸಿ, ತಮ್ಮ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಕೊಹ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ಸೂರ್ಯ, " ಮೈದಾನದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡಲು ಕಾಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.