ಕರ್ನಾಟಕ

karnataka

ETV Bharat / sports

ರಾಹುಲ್​ ಮಾತುಗಳು ನನ್ನನ್ನು ಪ್ರೇರೇಪಿಸಿದವು, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ: ಕ್ಯಾಮರೊನ್ ಗ್ರೀನ್​ - ರಾಹುಲ್ ಗ್ರೀನ್​

ಗ್ರೀನ್​ ಮನುಕ ಓವೆಲ್​ನಲ್ಲಿ ಆಸ್ಟ್ರೇಲಿಯಾ 117ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ ಇಳಿದಿದ್ದರು. ಪದಾರ್ಪಣೆ ಮಾಡಿದ್ದ ಅವರು ಬ್ಯಾಟಿಂಗ್ ಮಾಡುವ ವೇಳೆ ಒತ್ತಡಕ್ಕೆ ಒಳಗಾಗಿದ್ದರು. ಆದರೆ ಈ ವೇಳೆ ಅವರನ್ನು ರಾಹುಲ್​ ಸ್ಪೂರ್ತಿದಾಯಕ ಮಾತುಗಳಿಂದ ತಮ್ಮನ್ನು ಪ್ರೇರಿಪಿಸಿ ತನ್ನಲ್ಲಿದ್ದ ಒತ್ತಡವನ್ನು ಕಡಿಮೆ ಮಾಡಿದರು ಎಂದು ಹೇಳಿಕೊಡಿಂದ್ದಾರೆ.

ಕ್ಯಾಮರೊನ್ ಗ್ರೀನ್​
ಕ್ಯಾಮರೊನ್ ಗ್ರೀನ್​

By

Published : Dec 3, 2020, 8:13 PM IST

Updated : Dec 3, 2020, 8:19 PM IST

ಕ್ಯಾನ್ಬೆರಾ: ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಪದಾರ್ಪಣೆ ಮಾಡಿದ ಯುವ ಆಟಗಾರ ಕ್ಯಾಮರೊನ್​ ಗ್ರೀನ್​ , ಭಾರತದ ವಿಕೆಟ್​ ಕೀಪರ್ ರಾಹುಲ್​ ತಮ್ಮನ್ನು ಪ್ರೇರೇಪಿಸಿದ್ದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಗ್ರೀನ್​ ಮನುಕ ಓವೆಲ್​ನಲ್ಲಿ ಆಸ್ಟ್ರೇಲಿಯಾ 117ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ ಇಳಿದಿದ್ದರು. ಪದಾರ್ಪಣೆ ಮಾಡಿದ್ದ ಅವರು ಬ್ಯಾಟಿಂಗ್ ಮಾಡುವ ವೇಳೆ ಒತ್ತಡಕ್ಕೆ ಒಳಗಾಗಿದ್ದರು. ಆದರೆ, ಈ ವೇಳೆ ಅವರನ್ನು ರಾಹುಲ್​ ಸ್ಪೂರ್ತಿದಾಯಕ ಮಾತುಗಳಿಂದ ತಮ್ಮನ್ನು ಪ್ರೇರೇಪಿಸಿ ತನ್ನಲ್ಲಿದ್ದ ಒತ್ತಡವನ್ನು ಕಡಿಮೆ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

"ನಾನು ಬ್ಯಾಟಿಂಗ್‌ಗೆ ಇಳಿದಾಗ ಭಾರತ ತಂಡದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಆಡಿದ ಕೆಲವು ಮಾತುಗಳನ್ನು ನಾನು ಎಂದಿಗೂ ಮರೆಯಲಾರೆ. ಆ ಕ್ಷಣದಲ್ಲಿ ನನ್ನಲ್ಲಿದ್ದ ಆತಂಕ ಮತ್ತು ಒತ್ತಡವನ್ನು ಹಿಂದೆ ಸರಿಯುವಂತೆ ಮಾಡಿತು" ಎನ್ನುವ ಮೂಲಕ ಗ್ರೀನ್ ರಾಹುಲ್​ರನ್ನು ಮೆಚ್ಚಿ ಮಾತನಾಡಿದ್ದಾರೆ.

" ಕೆಎಲ್ ರಾಹುಲ್ ಸ್ಟಂಪ್​ಗಳ ಹಿಂದೆ ನಿಜಕ್ಕೂ ಅದ್ಭುತವಾಗಿ ಪ್ರೇರೇಪಿಸಿದರು. ಅವರು ನನ್ನನ್ನು ಕೇಳಿದರು ' ನೀನು ನರ್ವಸ್ ಆಗಿದ್ದೀಯಾ' ಎಂದು ಕೇಳಿದರು. ಅದಕ್ಕೆ ನಾನು ' ಹೌದು, ಸ್ವಲ್ಪ ನರ್ವಸ್ ಆಗಿದ್ದೇನೆ' ಎಂದು ಉತ್ತರಿಸಿದೆ. ಅದಕ್ಕೆ ಅವರು 'ಉತ್ತಮವಾಗಿ ಆಡು ಯಂಗ್‌ಸ್ಟರ್' ಸ್ಪೂರ್ತಿಯ ಮಾತುಗಳ ಮೂಲಕ ನನಗೆ ಪ್ರೇರಣೆ ನೀಡಿದರು. ಅವರ ಆ ಮಾತುಗಳು ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿತು" ಎಂದು ಗ್ರೀನ್​ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ರೀನ್​ ಮೂರನೇ ಏಕದಿನ ಪಂದ್ಯದಲ್ಲಿ 27 ಎಸೆತಗಳಲ್ಲಿ 21 ರನ್​ಗಳಿಸಿದ್ದರು. ಬೌಲಿಂಗ್​ನಲ್ಲಿ 4 ಓವರ್​ಗಳಲ್ಲಿ 27 ರನ್​ ಬಿಟ್ಟುಕೊಟ್ಟಿದ್ದರು.

Last Updated : Dec 3, 2020, 8:19 PM IST

ABOUT THE AUTHOR

...view details