ಮೆಲ್ಬೋರ್ನ್: ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧದ ನಂತರ ವಾಪಸ್ ಆಗಿರುವ ಸ್ಮಿತ್, ವಾರ್ನರ್ ಹಾಗೂ ಬ್ಯಾನ್ಕ್ರಾಫ್ಟ್ ಇಂಗ್ಲೆಂಡ್ ವಿರುದ್ಧ ನಡೆಯುವ ಆ್ಯಶಸ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಯಾಂಡ್ ಪೇಪರ್ನಿಂದ ಬ್ಯಾನ್ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಈ ಪ್ರಕರಣ ಸಾಬೀ ತಾದ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಾಯಕ ಸ್ಮಿತ್, ಉಪನಾಯಕ ವಾರ್ನರ್ಗೆ ಒಂದು ವರ್ಷ ಹಾಗೂ ಬ್ಯಾನ್ಕ್ರಾಫ್ಟ್ಗೆ 9 ತಿಂಗಳು ನಿಷೇಧ ಹೇರಿತ್ತು. ಇದೀಗ ನಿಷೇಧದ ಅವಧಿ ಪೂರ್ಣಗೊಂಡಿರುವುದರಿಂದ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ.