ಕರ್ನಾಟಕ

karnataka

ETV Bharat / sports

ಎಬಿಡಿ, ಪೊಲಾರ್ಡ್​ ರೀತಿ ಪಂದ್ಯ ಗೆದ್ದು ಕೊಡುವ ಸಾಮರ್ಥ್ಯ ಈತನಿಗೆ: ಸ್ಟೀವ್ ಸ್ಮಿತ್ - ಐಪಿಎಲ್ 2020

ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಆಸಕ್ತಿದಾಯಕವಾಗಿದೆ. ಯಾಕೆಂದರೆ, ಜೋಸ್ ನಂಬಲಸಾಧ್ಯವಾದ ಟಾಪ್ ಆರ್ಡರ್ ಬ್ಯಾಟ್ಸ್​ಮನ್​..

ಸ್ಟಿವ್ ಸ್ಮಿತ್
ಸ್ಟಿವ್ ಸ್ಮಿತ್

By

Published : Oct 20, 2020, 8:23 PM IST

ಅಬುಧಾಬಿ :ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯ ಆಕರ್ಷಕ ಅರ್ಧಶತಕ ಸಿಡಿಸಿ ರಾಜಸ್ಥಾನ್​ಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಜೋಸ್ ಬಟ್ಲರ್​ರನ್ನು ನಾಯಕ ಸ್ಮಿತ್​ ಎಬಿಡಿ ಮತ್ತು ಪೊಲಾರ್ಡ್​ಗೆ ಹೋಲಿಕೆ ಮಾಡಿ ಮ್ಯಾಚ್​ ವಿನ್ನರ್​ ಎಂದು ಹೊಗಳಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಸ್ಮಿತ್​, ಆತ ಯಾರಿಗೂ 2ನೇ ಆಟಗಾರನಲ್ಲ(ಹೋಲಿಕೆ ಮಾಡುವುದಕ್ಕೆ), ಆತನನ್ನು ಹೊಂದಿರುವುದಕ್ಕೆ ನಾವು ಅದೃಷ್ಟವಂತರು. ಅವರ ಬ್ಯಾಟಿಂಗ್‌ನಲ್ಲಿ ತುಂಬಾ ಬುದ್ದಿವಂತಿಕೆಯಿದೆ ಎಂದು ಸ್ಮಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದಿನ ಕೆಲವು ಪಂದ್ಯಗಳಲ್ಲಿ ಟಾಪ್​ ಆರ್ಡರ್ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿದಿದ್ದ ಬಟ್ಲರ್ ಸಿಎಸ್​ಕೆ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಇದು ತಂಡದ ಸಮತೋಲನಕ್ಕಾಗಿ ಮಾಡಲಾಗಿದೆ ಎಂದು ಆಸೀಸ್​ ಆಟಗಾರ ತಿಳಿಸಿದ್ದಾರೆ.

ಜೋಸ್ ಬಟ್ಲರ್​

ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಆಸಕ್ತಿದಾಯಕವಾಗಿದೆ. ಯಾಕೆಂದರೆ, ಜೋಸ್ ನಂಬಲಸಾಧ್ಯವಾದ ಟಾಪ್ ಆರ್ಡರ್ ಬ್ಯಾಟ್ಸ್​ಮನ್​. ಆದರೆ, ಅವರು ಎಬಿಡಿ, ಪೊಲಾರ್ಡ್​ ಹಾಗೂ ಪಾಂಡ್ಯ ರೀತಿಯಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಂತಹ ಬ್ಯಾಟ್ಸ್​ಮನ್​ರನ್ನು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲೇಳುವುದು ತುಂಬಾ ಕಷ್ಟವಾಗುತ್ತದೆ. ಆದರೆ, ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸಿಎಸ್​ಕೆ ವಿರುದ್ಧ 28 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದಿದ್ದ ಜೋಸ್ ಬಟ್ಲರ್ ಕೇವಲ 48 ಎಸೆತಗಳಲ್ಲಿ ಅಜೇಯ 70 ರನ್​ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ABOUT THE AUTHOR

...view details