ಲಂಡನ್:ಮಾರ್ಚ್ 12ರಿಂದ 20ರವರೆಗೆ ಅಹಮದಾಬಾದ್ನಲ್ಲಿ ನಡೆಯಲಿರುವ 5 ಟಿ-20 ಸರಣಿಗಾಗಿ ಇಸಿಬಿ 16 ಸದಸ್ಯರ ತಂಡ ಪ್ರಕಟಿಸಿದ್ದು, ಸೀನಿಯರ್ ವಿಕೆಟ್ ಕೀಪರ್, ಬ್ಯಾಟ್ಸ್ಮನ್ಗಳಾದ ಜೋಸ್ ಬಟ್ಲರ್ ಮತ್ತು ಜಾನಿ ಬೈರ್ಸ್ಟೋವ್ ತಂಡಕ್ಕೆ ಮರಳಿದ್ದಾರೆ.
ಮೊದಲ ಟೆಸ್ಟ್ನ ನಂತರ ಬಟ್ಲರ್ ತವರಿಗೆ ಮರಳಿದ್ದಾರೆ. ಜಾನಿ ಬೈರ್ಸ್ಟೋವ್ ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ತವರಿಗೆ ಮರಳಿದ್ದರು. ಅಲ್ಲದೆ ಅವರನ್ನು ರೊಟೇಷನ್ ಪದ್ಧತಿ ಅನುಸಾರ ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು.
ಇದೀಗ ಟಿ-20 ತಂಡಕ್ಕೆ ಇವರಿಬ್ಬರು ಮರಳಿದ್ದಾರೆ. ಇವರ ಜೊತೆಗೆ ಟೆಸ್ಟ್ ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಸ್ಯಾಮ್ ಕರ್ರನ್ ಕೂಡ ಚುಟುಕು ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೆ 14ನೇ ಐಪಿಎಲ್ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ನಂ.1 ಟಿ-20 ಬ್ಯಾಟ್ಸ್ಮನ್ ಡೇವಿಡ್ ಮಲನ್ ಕೂಡ ಟಿ-20 ತಂಡದಲ್ಲಿ ಆಡಲಿದ್ದಾರೆ.