ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದರೆ, ಇತ್ತ ಚೆನ್ನೈ ಹೀನಾಯ ಪ್ರದರ್ಶನದಿಂದ ಸೋಲನುಭವಿಸಿ ಪ್ಲೇ ಆಫ್ ಹಾದಿಯಿಂದ ಬಹುತೇಕ ಹೊರಬಿದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 126 ರನ್ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ನಾಯಕ ಸ್ಮಿತ್ ಹಾಗೂ ಬಟ್ಲರ್ ಅವರ ಬೊಂಬಾಟ್ ಜೊತೆಯಾಟದ ನೆರವಿನಿಂದ 7 ವಿಕೆಟ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.
ಆರಂಭಿಕರಾಗಿ ಕಣಕ್ಕಿಳಿದ ಬೆನ್ಸ್ಟೋಕ್ಸ್ (19), ಉತ್ತಪ್ಪ(4), ಸಂಜು ಸಾಮ್ಸನ್(0) ತಂಡದ ಮೊತ್ತ 28 ರನ್ಗಳಿಗೆ 3 ವಿಕೆಟ್ ಒಪ್ಪಿಸಿದರು. ಆದರೆ 4ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಜೋಸ್ ಬಟ್ಲರ್ ಹಾಗೂ ಸ್ಟಿವ್ ಸ್ಮಿತ್ ಮುರಿಯದ 4 ನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿ ಇನ್ನು 15 ಎಸೆತಗಳಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.