ಸಿಡ್ನಿ(ಆಸ್ಟ್ರೇಲಿಯಾ): ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಆಸಿಸ್ ಕ್ರಿಕೆಟಿಗರು ಆಯೋಜನೆ ಮಾಡಿದ್ದ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಿಂದ 7.7 ಮಿಲಿಯನ್ ಡಾಲರ್ಗೂ ಹೆಚ್ಚು ಹಣ ಸಂಗ್ರಹ ಆಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನೆಲ್ಲಾ ಒಂದುಗೂಡಿಸಿ ಆಸ್ಟ್ರೇಲಿಯಾ ದಿಗ್ಗಜರಾದ ರಿಕಿ ಪಾಂಟಿಂಗ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿ ಎರಡು ತಂಡಗಳನ್ನು ಸೇರಿಸಿ ಮೆಲ್ಬೋರ್ನ್‌ನ ಜಂಕ್ಷನ್ ಓವಲ್ನಲ್ಲಿ 10 ಓವರ್ಗಳ ಪಂದ್ಯ ಆಡಿಸಲಾಗಿತ್ತು. ಈ ಪಂದ್ಯದಲ್ಲಿ ಪಾಂಟಿಂಗ್ ಇಲೆವೆನ್ ತಂಡ, ಗಿಲ್ಕ್ರಿಸ್ಟ್ ಇಲೆವೆನ್ ವಿರುದ್ಧ 1 ರನ್ನಿಂದ ಗೆಲುವು ಸಾಧಿಸಿದೆ.