ಕರ್ನಾಟಕ

karnataka

ETV Bharat / sports

ಭಾರತ - ಆಸ್ಟ್ರೇಲಿಯಾ 4ನೇ ಟೆಸ್ಟ್: ಗಬ್ಬಾ ಮೈದಾನದಲ್ಲಿ ಬುಮ್ರಾ ನಿರ್ಣಾಯಕ - ಗಬ್ಬಾ ಮೈದಾನದಲ್ಲಿ ಬುಮ್ರಾ ನಿರ್ಣಾಯಕ

ಗಬ್ಬಾ ವಿಕೆಟ್ ಸವಾಲಿನ ಬಗ್ಗೆ ವಿವರಿಸಿರುವ ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್, ಬುಮ್ರಾ ಅಲ್ಲಿನ ಕಂಡೀಷನ್​ಗೆ ಸುಲಭವಾಗಿ ಹೊಂದಿಕೊಳ್ಳಬಲ್ಲರು ಎಂದಿದ್ದಾರೆ.

Bumrah crucial for Gabba
ಗಬ್ಬಾ ಮೈದಾನದಲ್ಲಿ ಬುಮ್ರಾ ನಿರ್ಣಾಯಕ

By

Published : Jan 14, 2021, 8:02 AM IST

ನವದೆಹಲಿ: ಬ್ರಿಸ್ಬೇನ್ ಟೆಸ್ಟ್​ಗೂ ಮುನ್ನ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸಮಯಕ್ಕೆ ಸರಿಯಾಗಿ ಫಿಟ್ನೆಸ್ ಅನ್ನು ಮರಳಿ ಪಡೆಯಲಿದ್ದಾರೆ ಎಂದು ಟೀಂ ಇಂಡಿಯಾ ಆಶಿಸಿದೆ. ಹಲವು ಆಟಗಾರರ ಅಲಭ್ಯದಿಂದಾಗಿ, ಬುಮ್ರಾ ಕಣಕ್ಕಿಳಿಯುವುದು ಮುಖ್ಯವಾಗಿದೆ.

ಮೂರನೇ ಟೆಸ್ಟ್​ನ ಮೂರನೇ ದಿನ ದಿನ ಫೀಲ್ಡಿಂಗ್​ ವೇಳೆ ಚೆಂಡನ್ನು ತಡೆಯುವ ವೇಳೆ ಹೊಟ್ಟೆಯ ಭಾಗಕ್ಕೆ ಪೆಟ್ಟುಮಾಡಿಕೊಂಡಿದ್ದ ಬುಮ್ರಾ, ನೋವಿನಿಂದ ಬಳಲುತ್ತಿದ್ದರು. 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಸಮಯದಲ್ಲಿ ತಂಡದಲ್ಲಿದ್ದ ಏಕೈಕ ವೇಗಿಯಾಗಿದ್ದು, ಉಳಿದ ವೇಗಿಗಳು ಗಾಯದ ಕಾರಣ ಅಲಭ್ಯರಾಗಿದ್ದಾರೆ.

ಆರು ವರ್ಷಗಳ ಅಂತರದ ನಂತರ ಭಾರತ ಗಬ್ಬಾದಲ್ಲಿ ಟೆಸ್ಟ್ ಆಡುತ್ತಿದೆ. ಪ್ರಸ್ತುತ ತಂಡದಲ್ಲಿ, 2014ರ ತಂಡದಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ಪ್ರಸ್ತುತ ತಂಡದಲ್ಲಿದ್ದಾರೆ. ಆ ಪೈಕಿ ಮೂವರು ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಮತ್ತು ಸ್ಲಿನ್ನರ್ ಆರ್ ಅಶ್ವಿನ್ ಕೂಡ ಅಂದಿನ ಪಂದ್ಯವಾಡಿದ್ರು.

ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು ಗಬ್ಬಾ ವಿಕೆಟ್ ಸವಾಲಿನ ಬಗ್ಗೆ ವಿವರಿಸಿದ್ದಾರೆ. ಆದರೆ, ಗಾಯಗೊಂಡು ಸ್ವದೇಶಕ್ಕೆ ಮರಳಿದವರು ಸೇರಿದಂತೆ ಭಾರತದ ಎಲ್ಲ ಬೌಲರ್‌ಗಳಲ್ಲಿ ಬುಮ್ರಾ ಅಲ್ಲಿನ ಕಂಡೀಷನ್​ಗೆ ಸುಲಭವಾಗಿ ಹೊಂದಿಕೊಳ್ಳಬಲ್ಲರು ಎಂದಿದ್ದಾರೆ.

"ಗಬ್ಬಾದಂತಹ ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ಭಾರತಕ್ಕೆ ಬುಮ್ರಾ ನಿರ್ಣಾಯಕ ಎಂದು ನಾನು ಭಾವಿಸುತ್ತೇನೆ. ಅವರು ಆಸ್ಟ್ರೇಲಿಯಾದಲ್ಲಿ ಯಶಸ್ವಿಯಾಗಿದ್ದಾರೆ. ಏಕೆಂದರೆ ಅವರು ಫುಲ್​ ಲೆಂತ್ ಬಾಲ್ ಬೌಲ್ ಮಾಡುತ್ತಾರೆ. ಬ್ರಿಸ್ಬೇನ್‌ನಲ್ಲಿ ಅಥವಾ ಪರ್ತ್‌ನಲ್ಲಿ ಬೇಕಾದ ಲೆಂತ್ ಇತರ ಭಾರತೀಯ ಬೌಲರ್‌ಗಳಿಗಿಂತ ಅವರಿಗೆ ಹೆಚ್ಚು ಸುಲಭವಾಗುತ್ತದೆ" ಎಂದು ಪಠಾಣ್ ತಿಳಿಸಿದ್ದಾರೆ.

ABOUT THE AUTHOR

...view details