ಬೆಂಗಳೂರು:ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಅನಾರೋಗ್ಯದ ಕಾರಣ ನಿನ್ನೆ ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಗೆ ದಾಖಲಾಗಿದ್ದರು.
ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದರು. ಮಾತನಾಡುವ ವೇಳೆ ತೊದಲುತ್ತಿದ್ದರು, ಕೂಡಲೆ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ಎರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ. ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಇನ್ನು ಆಸ್ಪತ್ರೆ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತಸ್ವಾಮಿ, ಕೂಡಾ ಬಿ.ಎಸ್.ಚಂದ್ರಶೇಖರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಅವರ ಆರೋಗ್ಯ ಸ್ಥೀರವಾಗಿದೆ, ಇನ್ನೂ ಒಂದೇರೆಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಓದಿ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಆಸ್ಪತ್ರೆಗೆ ದಾಖಲು
ಬಿ ಎಸ್ ಚಂದ್ರಶೇಖರ್, ಟೀಂ ಇಂಡಿಯಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 160 ರನ್ ಗಳಿಸಿರುವ ಇವರು 242 ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಗಳಿಸಿದ ರನ್ಗಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ ಇಬ್ಬರು ಟೆಸ್ಟ್ ಕ್ರಿಕೆಟಿಗರ ಪೈಕಿ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.