ಕರ್ನಾಟಕ

karnataka

ETV Bharat / sports

ವೆಸ್ಟ್​ ಇಂಡೀಸ್​ ಕ್ರಿಕೆಟ್​ ದಿಗ್ಗಜ ಬ್ರಿಯಾನ್​ ಲಾರಾಗೆ ಎದೆನೋವು... ಆಸ್ಪತ್ರೆಗೆ ದಾಖಲು - ಎದೆನೋವು

ವೆಸ್ಟ್​ ಇಂಡೀಸ್​ ಕ್ರಿಕೆಟ್​ ದಿಗ್ಗಜ ಬ್ರಿಯಾನ್​ ಲಾರಾಗೆ ಎದೆನೋವು ಕಾಣಿಸಿಕೊಂಡಿದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬ್ರಿಯಾನ್​ ಲಾರಾ

By

Published : Jun 25, 2019, 3:48 PM IST

Updated : Jun 25, 2019, 11:32 PM IST

ಮುಂಬೈ:ವೆಸ್ಟ್​ ಇಂಡೀಸ್​ನ ಮಾಜಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್​ ಲಾರಾಗೆ ಎದೆನೋವು ಕಾಣಿಸಿಕೊಂಡಿರುವ ಕಾರಣ ಅವರನ್ನ ಮುಂಬೈನ ಗ್ಲೋಬಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ಲಾರಾ ದಾಖಲು

ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಆಸ್ಪತ್ರೆ ಮೂಲಗಳು ನಿರಾಕರಿಸಿವೆ ಎಂದು ತಿಳಿದು ಬಂದಿದೆ. ಈ ಹಿಂದೆ ಹೃದಯಾಘಾತಕ್ಕೊಳಗಾಗಿ ಬ್ರಿಯಾನ್​ ಲಾರಾ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬ್ರಿಯಾನ್​ ಲಾರಾ

2007ರಲ್ಲೇ ಎಲ್ಲ ಮಾದರಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಲಾರಾ, ವೆಸ್ಟ್​ ಇಂಡೀಸ್​ನ ದಿಗ್ಗಜ ಕ್ರಿಕೆಟ್​ರ ಆಗಿದ್ದಾರೆ. 299 ಏಕದಿನ ಕ್ರಿಕೆಟ್​​ನಿಂದ ಲಾರಾ 10,405 ರನ್​ ಗಳಿಸಿದ್ದು, ಅದರಲ್ಲಿ 19 ಶತಕ ಹಾಗೂ 63 ಅರ್ಧಶತಕ ಸೇರಿವೆ. 131 ಟೆಸ್ಟ್​​ ಪಂದ್ಯಗಳ 232 ಇನ್ನಿಂಗ್ಸ್​​ಗಳಿಂದ 11,953 ರನ್ ​ಗಳಿಸಿದ್ದಾರೆ. ಬ್ರಿಯಾನ್​ ಲಾರಾ ತಂದೆ 1989ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಐಸಿಸಿ ವಿಶ್ವಕಪ್​​ನ ನೇರ ಪ್ರಸಾರ ನೀಡುತ್ತಿರುವ ಸ್ಟಾರ್​ ಸ್ಪೋರ್ಟ್ಸ್​​ನಲ್ಲಿ ವೀಕ್ಷಕ ವಿವರಣೆಗಾರರಾಗಿ ಬ್ರಿಯಾನ್​ ಲಾರಾ ಕಾರ್ಯನಿರ್ವಹಿಸುತ್ತಿದ್ದಾರೆ.

ನಾನು ಹುಷಾರಾಗಿರುವೆ: ನಾಳೆ ಹೋಟೆಲ್​ಗೆ ತೆರಳುವೆ

ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಯಾನ್​​ ಲಾರಾ ತಾವೂ ಆರಾಮಾಗಿದ್ದು, ನಾಳೆ ಸಂಜೆ ವೇಳೆಗೆ ಹೋಟೆಲ್​ಗೆ ತೆರಳುವೆ ಎಂದು ಟ್ವೀಟ್​ ಮಾಡಿದ್ದಾರೆ.

Last Updated : Jun 25, 2019, 11:32 PM IST

ABOUT THE AUTHOR

...view details