ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರನ್ನು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅಭಿನಂದಿಸಿದ್ದಾರೆ.
ಮಂಗಳವಾರ ಅಂತ್ಯಗೊಂಡ ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ನ ಅಂತಿಮ ದಿನ ಪಾಕ್ ನಾಯಕ ಅಜರ್ ಅಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲನ್ನು ದಾಟಿದ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಆ್ಯಂಡರ್ಸನ್ ಪಾತ್ರರಾದರು.
ನಂಬಲಾಗದ 600 ಟೆಸ್ಟ್ ವಿಕೆಟ್‌ಗಳ ಸಾಧನೆಗೆ ಅಭಿನಂದನೆಗಳು ಜೇಮ್ಸ್ ಆ್ಯಂಡರ್ಸನ್. ಸೂರ್ಯನ ದೀರ್ಘವಾದ ಬಿಸಿ ದಿನಗಳು, ಅಭ್ಯಾಸಗಳು, ಗಾಯಗಳು, ಹಿನ್ನಡೆ ಮತ್ತು ಹತಾಶೆ ಈ ಎಲ್ಲದರ ಫಲಿತಾಂಶ ಇದು. 700 ವಿಕೆಟ್‌ಗಳ ಗುರಿ ಮುಂದಿದೆ ಎಂದು ಬ್ರೆಟ್ ಲೀ ಟ್ವೀಟ್ ಮಾಡಿದ್ದಾರೆ.
ಆಂಡರ್ಸನ್ ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಆಟಗಾರನಾಗಿದ್ದಾರೆ. ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708) ಮತ್ತು ಅನಿಲ್ ಕುಂಬ್ಳೆ (619) ವಿಕೆಟ್ ಪಡೆದು ಮೊದಲ ಮೂರು ಸ್ಥಾನದಲ್ಲಿದ್ದಾರೆ.