ಕರ್ನಾಟಕ

karnataka

ETV Bharat / sports

ಬ್ರೆಟ್​ ಲೀ ಪ್ರಕಾರ ಸಚಿನ್​ ಶತಕಗಳ ಶತಕದ ದಾಖಲೆಯನ್ನು ಈ ಬ್ಯಾಟ್ಸ್​ಮನ್ ಮುರಿಯಲಿದ್ದಾರಂತೆ

ವಿರಾಟ್​ ಕೊಹ್ಲಿ 248 ಏಕದಿನ ಪಂದ್ಯಗಳಿಂದ 43, 86 ಟೆಸ್ಟ್​ಗಳಿಂದ 27 ಶತಕ ದಾಖಲಿಸುವ ಮೂಲಕ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕ ಗಳಿಸಿದ್ದಾರೆ. ಸಚಿನ್​ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಇನ್ನೂ 30 ಶತಕಗಳ ಅವಶ್ಯಕತೆಯಿದೆ. ಬ್ರೆಟ್​ ಲೀ ಪ್ರಕಾರ ಕೊಹ್ಲಿ ಇನ್ನು 7-8 ವರ್ಷಗಳ ಕಾಲ ಕ್ರಿಕೆಟ್ ಆಡಿದರೆ ಖಂಡಿತ ಸಚಿನ್​ ದಾಖಲೆ ಮುರಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರೆಟ್​ ಲೀ
ಬ್ರೆಟ್​ ಲೀ

By

Published : Apr 26, 2020, 9:39 AM IST

ಮುಂಬೈ: ಕ್ರಿಕೆಟ್​ ದೇವರೆಂದೇ ಕರೆಸಿಕೊಳ್ಳುವ ಭಾರತ ತಂಡದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ಶತಕಗಳ ಶತಕದ ದಾಖಲೆಯನ್ನು ಹಾಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮುರಿಯಲಿದ್ದಾರೆ ಎಂದು ಆಸೀಸ್​ ಮಾಜಿ ವೇಗಿ ಬ್ರೆಟ್​ ಲೀ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಏಕದಿನ ಕ್ರಿಕೆಟ್​ಲ್ಲಿ 49 ಹಾಗೂ ಟೆಸ್ಟ್ ಕ್ರಿಕೆಟ್​​ನಲ್ಲಿ 51 ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ

ಇನ್ನು, ವಿರಾಟ್​ ಕೊಹ್ಲಿ 248 ಏಕದಿನ ಪಂದ್ಯಗಳಿಂದ 43, 86 ಟೆಸ್ಟ್​ಗಳಿಂದ 27 ಶತಕ ದಾಖಲಿಸುವ ಮೂಲಕ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕ ಗಳಿಸಿದ್ದಾರೆ. ಸಚಿನ್​ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಇನ್ನು 30 ಶತಕಗಳ ಅವಶ್ಯಕತೆಯಿದೆ. ಬ್ರೆಟ್​ ಲೀ ಪ್ರಕಾರ ಕೊಹ್ಲಿ ಇನ್ನು 7-8 ವರ್ಷಗಳ ಕಾಲ ಕ್ರಿಕೆಟ್ ಆಡಿದರೆ ಖಂಡಿತ ಸಚಿನ್​ ದಾಖಲೆ ಮುರಿಯಲಿದ್ದಾರೆ ಎಂದಿದ್ದಾರೆ.

ಸಚಿನ್​ ಶತಕಗಳ ಶತಕ ದಾಖಲೆಯನ್ನು ಮುರಿಯುವ ಎಲ್ಲಾ ಅರ್ಹತೆ ಕೊಹ್ಲಿ ಬಳಿಯಿದೆ. ಇದೆಲ್ಲವನ್ನು ಸಾಧ್ಯವಾಗಿಸುವ ಫಿಟ್​ನೆಸ್ ಕೂಡ ಕೊಹ್ಲಿಯಲ್ಲಿದೆ. ಮುಂದಿನ 7-8 ವರ್ಷಗಳ ಕಾಲ ಕ್ರಿಕೆಟ್​ ಆಡಿದರೆ ಈ ದಾಖಲೆ ನಿರ್ಮಿಸಲು ಸಾಧ್ಯವಾಗಲಿದೆ. ಆದರೆ ಈ ಪಯಣದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮಾನಸಿಕ ಶಕ್ತಿ ಅಗತ್ಯ. ಇದು ಕೊಹ್ಲಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details