ಕರ್ನಾಟಕ

karnataka

ETV Bharat / sports

ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ನಲ್ಲಿ ಸಲ್ಮಾನ್ ಖಾನ್, ಕತ್ರೀನಾ - ಬಿಪಿಎಲ್ ಲೇಟೆಸ್ಟ್ ನ್ಯೂಸ್

ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ನ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್​ ಸಲ್ಮಾನ್ ಖಾನ್​ ಮತ್ತು ನಟಿ ಕತ್ರೀನಾ ಕೈಫ್ ಪಾಲ್ಗೊಳ್ಳಲಿದ್ದಾರೆ.

Salman Khan and Katrina Kaif in BPL,ಬಿಪಿಎಲ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲ್ಮಾನ್ ಕತ್ರೀನಾ
ಸಲ್ಮಾನ್ ಖಾನ್, ಕತ್ರೀನಾ

By

Published : Dec 4, 2019, 6:26 PM IST

ಢಾಕಾ:ಇದೇ ಭಾನುವಾರ ನಡೆಯಲಿರುವ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ನ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್​ ಸಲ್ಮಾನ್ ಖಾನ್​ ಮತ್ತು ನಟಿ ಕತ್ರೀನಾ ಕೈಫ್ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಪಿಎಲ್ ಹಂಗಾಮಿ ಅಧ್ಯಕ್ಷ ಶೇಕ್ ಸೊಹೆಲ್, ಭಾನುವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್​ಗಳು ಉದ್ಘಾಟನಾ ಸಾಮಾರಂಭಕ್ಕೆ ಮೆರುಗು ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಆವೃತ್ತಿಗಿಂತ ಅದ್ಧೂರಿಯಾದ ಕಾರ್ಯಕ್ರಮ ನಡೆಸಲು ಬಿಪಿಎಲ್ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಈ ಮೊದಲು ಡಿ.3ಕ್ಕೆ ಉದ್ಘಾಟನಾ ಸಮಾರಂಭವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲ ಕಾರಣಗಳಿಂದ ಭಾನುವಾರಕ್ಕೆ ಮುಂದೂಡಲಾಗಿದೆ.

ಡಿ.11 ರಿಂದ ಆರಂಭವಾಗುವ ಬಿಪಿಎಲ್​ ಟೂರ್ನಿ, ಜನವರಿ 17ಕ್ಕೆ ಮುಕ್ತಾಯಗೊಳ್ಳಲಿದೆ. ಟೂರ್ನಿಯಲ್ಲಿ ಒಟ್ಟು 7 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಕರೆಯಲ್ಪಡುವ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮ ದಿನಾಚರಣೆಯನ್ನು ಅಂಗವಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ.

ABOUT THE AUTHOR

...view details