ನವದೆಹಲಿ :ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿರುವ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸರಣಿ ಶ್ರೇಷ್ಠ ಪ್ರಶಸ್ತಿ ಸಿರಾಜ್ಗೆ ಸಿಗಬೇಕೆಂದು ಆಶಿಸಿದ್ದಾರೆ.
ಸರಣಿ ಆರಂಭಕ್ಕೂ ಮುನ್ನ ಟೆಸ್ಟ್ ತಂಡಕ್ಕೆ ಸಿರಾಜ್ ಆಯ್ಕೆಯಾಗಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಯುವ ವೇಗಿ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅವರು ಆಡಿರುವ ಮೂರು ಪಂದ್ಯಗಳಿಂದ 13 ವಿಕೆಟ್ ಪಡೆದು ಮಿಂಚಿದ್ದಾರೆ.
"ಸಿರಾಜ್ ಈ ಪ್ರವಾಸದಲ್ಲೇ ಶ್ರೇಷ್ಠ ಆಟಗಾರನಾಗಿದ್ದಾರೆ. ಮೊದಲ ಸರಣಿಯಲ್ಲೇ ತಂಡದ ಬೌಲಿಂಗ್ ವಿಭಾಗದ ನಾಯಕನಾಗಿದ್ದಲ್ಲದೆ, ತಮ್ಮಂತೆಯೇ ಅನುಭವಿಗಳಲ್ಲದವರನ್ನ ಮುಂದೆ ನಿಂತು ನಡೆಸಿದ್ದಾರೆ.