ಮೆಲ್ಬೋರ್ನ್: ಭಾರತದ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಸ್ಟೇಲಿಯಾ ತಂಡದ ನಾಯಕ ಟಿಮ್ ಪೇನ್ ರನ್ಔಟ್ನಿಂದ ತಪ್ಪಿಸಿಕೊಂಡಿದ್ದಕ್ಕೆ ಆಸೀಸ್ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಟಿಮ್ ಪೇನ್ ವಿರುದ್ಧ 55ನೇ ಓವರ್ನಲ್ಲಿ ಭಾರತ ತಂಡ ರನ್ ಔಟ್ಗೆ ಅಪೀಲ್ ಮಾಡಿತ್ತು. ಟಿವಿ ರಿವ್ಯೂ ವೀಕ್ಷಿಸಿದ 3ನೇ ಅಂಪೈರ್ ಬ್ಯಾಟ್ ಲೈನ್ನಲ್ಲಿಲ್ಲ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಆಸ್ಟ್ರೇಲಿಯಾ ನಾಯಕನನ್ನು ನಾಟೌಟ್ ಎಂದು ಘೋಷಿಸಿದರು.
ಟಿಮ್ ಪೇನ್ ರನ್ಔಟ್ನಿಂದ ತಪ್ಪಿಸಿಕೊಂಡಿದ್ದಕ್ಕೆ ತುಂಬಾ ಅಚ್ಚರಿಯಾಗುತ್ತಿದೆ. ಅವರ ಬ್ಯಾಟ್‌ನ ಯಾವುದೇ ಭಾಗ ಲೈನ್ ಕ್ರಾಸ್ ಮಾಡಿಲ್ಲ. ನನ್ನ ಪ್ರಕಾರ ಇದು ಔಟ್" ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
ಓದಿ: ಬಾಕ್ಸಿಂಗ್ ಡೇ ಟೆಸ್ಟ್.. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ ಬುಮ್ರಾ, ಅಶ್ವಿನ್ ಪೆಟ್ಟು ; ಟೀಂ ಇಂಡಿಯಾ 36/1