ಮೆಲ್ಬೋರ್ನ್ (ಆಸ್ಟ್ರೇಲಿಯಾ): ವಿಕ್ಟೋರಿಯಾ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಿಂದ ಸ್ಥಳಾಂತರಿಸಬೇಕೇ ಎಂದು ನಿರ್ಧರಿಸಲು ಇನ್ನೂ ಸಾಕಷ್ಟು ಸಮಯ ಉಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಪಾದಿಸಿದೆ.
ವಿಕ್ಟೋರಿಯಾ ಪ್ರಸ್ತುತ ಕೋವಿಡ್ ಸೋಂಕಿನ ಹರಡುವಿಕೆ ಎರಡನೇ ಹಂತದಲ್ಲಿದೆ. ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಲ್ಲಿ ಮೆಲ್ಬೋರ್ನ್ ದೇಶದ ಉಳಿದ ಭಾಗಗಳಿಗಿಂತ ತುಂಬಾ ಹಿಂದುಳಿದಿದೆ. ಆದ್ದರಿಂದ ಇಲ್ಲಿ ಪ್ರಮುಖ ಇವೆಂಟ್ಗಳ ಆತಿಥ್ಯ ವಹಿಸುವುದಕ್ಕೆ ಸಾಕಷ್ಟು ಗೊಂದಲಗಳಿವೆ.
ಆದರೆ, ಸೋಂಕಿನ ಪ್ರಮಾಣ ಕಡಿಮೆಯಾಗಿ, ಜನರು ಪಂದ್ಯ ವೀಕ್ಷಣೆಗೆ ಬರುವುದಾದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲೇ ನಡೆಸಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹ್ಯಾಕ್ಲೆ ತಿಳಿಸಿದ್ದಾರೆ.