ಮುಂಬೈ: ಬೌಲರ್ಗಳು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರಿಗೆ ಬೌಲರ್ಗಳ ಸಾಮರ್ಥ್ಯದ ಬಗ್ಗೆ ಅರಿವಿದ್ದು, ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತೆಗೆಯುವ ಕಲೆ ತಿಳಿದಿದ್ದಾರೆ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್ ತಿಳಿಸಿದ್ದಾರೆ.
ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಕನ್ನಡಿಗ ಗೌತಮ್ರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 9.75 ಕೋಟಿ ರೂ ನೀಡಿ ಖರೀದಿಸಿದೆ. ಈಗಾಗಲೆ ಐಪಿಎಲ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿರುವ ಗೌತಮ್, ಧೋನಿ ನಾಯಕತ್ವದಲ್ಲಿ ಆಡುವ ಕನಸು ಈ ವರ್ಷ ನನಸಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಸಿಎಸ್ಕೆ ವೆಬ್ಸೈಟ್ಗೆ ತಿಳಿಸಿದ್ದಾರೆ.
"ಬೌಲರ್ಗಳು ಮಹಿ ಭಾಯ್ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರು ಬೌಲರ್ಗಳ ಬಲವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಉತ್ತಮ ಸಾಧನೆಯನ್ನು ಹೊರತೆಗೆಯುವುದು ಹೇಗೆ ಎಂದು ತಿಳಿದಿದೆ. ಸಿಎಸ್ಕೆ ಅಂತಹ ಚಾಂಪಿಯನ್ಸ್ ತಂಡದಲ್ಲಿ ಆಡುವಲ್ಲಿ ನಾನು ಯಾವುದೇ ಒತ್ತಡ ಅನುಭವಿಸುವುದಿಲ್ಲ" ಎಂದು ಅವರು ಹೇಳುತ್ತಾರೆ.