ಶಾರ್ಜಾ: ಮೊಹಮ್ಮದ್ ಶಮಿ, ಬಿಷ್ಣೋಯ್ ಬೌಲಿಂಗ್ ದಾಳಿಗೆ ಸಿಲುಕಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂಜಾಬ್ ತಂಡಕ್ಕೆ 150 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ರಾಹುಲ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಪಂಜಾಬ್ ಬೌಲರ್ಗಳು 2 ಓವರ್ ಒಳಗೆ 3 ವಿಕೆಟ್ ಒಪ್ಪಿಸಿದರು.
ಆರಂಭಿಕರಾಗಿ ಕಣಕ್ಕಿಳಿದ ನಿತೀಶ್ ರಾಣಾ ಯಾವುದೇ ರನ್ಗಳಿಸದೇ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಗೇಲ್ಗೆ ಕ್ಯಾಚ್ ನೀಡಿ ಔಟಾದರೆ, ಶಮಿ ರಾಹುಲ್ ತ್ರಿಪಾಠಿ(7), ದಿನೇಶ್ ಕಾರ್ತಿಕ್(0) ವಿಕೆಟ್ ಪಡೆದು ಕೆಕೆಆರ್ಗೆ ಆಘಾತ ನೀಡಿದರು.
ಆದರೆ 4ನೇ ವಿಕೆಟ್ ಜೊತೆಯಾಟದಲ್ಲಿ ಇಯಾನ್ ಮಾರ್ಗನ್ ಹಾಗೂ ಗಿಲ್ 81 ರನ್ಗಳ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮೊರೆ ಹೋದ ಮಾರ್ಗನ್ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 40 ರನ್ಗಳಿಸಿ ರವಿ ಬಿಷ್ಣೋಯ್ ಸ್ಪಿನ್ ಮೋಡಿಗೆ ಬಲಿಯಾದರು.
ನಂತರ ಮತ್ತೆ ಮೇಲುಗೈ ಸಾಧಿಸಿ ಪಂಜಾಬ್ ಬೌಲರ್ಗಳು ಸುನೀಲ್ ನರೈನ್(6), ನಾಗರಕೋಟಿ(6),ಪ್ಯಾಟ್ ಕಮ್ಮಿನ್ಸ್(1), ವರುಣ್ ಚಕ್ರವರ್ತಿ(2) ವಿಕೆಟ್ ಪಡೆದರು.
ಆರಂಭಿಕನಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ 19ನೇ ಓವರ್ನಲ್ಲಿ 57 ರನ್ಗಳಿಸಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 4 ಭರ್ಜರಿ ಸಿಕ್ಸರ್ಗಳು ಹಾಗೂ 3 ಬೌಂಡರಿಗಳಿದ್ದವು. ಲೂಕಿ ಫರ್ಗ್ಯುಸನ್ 13 ಎಸೆತಗಳಲ್ಲಿ 24 ರನ್ಗಳಿಸಿದರು.
ಪಂಜಾಬ್ ಪರ ಶಮಿ 3 ವಿಕೆಟ್ಸ್, ರವಿ ಬಿಷ್ಣೋಯ್ , ಮುರುಗನ್ ಅಶ್ವಿನ್ ಹಾಗೂ ಜೋರ್ಡಾನ್ ತಲಾ 2 ವಿಕೆಟ್ ಪಡೆದು ಮಿಂಚಿದರು.