ಕರ್ನಾಟಕ

karnataka

ETV Bharat / sports

ಅಂಧರ ಟಿ20 ಕ್ರಿಕೆಟ್: ಜಮೈಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ - kannada news

ಜಮೈಕಾದ ಕಿಂಗ್ ಸ್ಟನ್ ನಲ್ಲಿ ನಡೆಯುತ್ತಿರುವ ಅಂಧರ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ಜಮೈಕಾ ವಿರುದ್ಧ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್​ ಮಾಡಿದೆ.

ಅಂಧರ ಟಿ20 ಕ್ರಿಕೆಟ್: ಜಮೈಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

By

Published : Jul 29, 2019, 3:19 AM IST

ಕಿಂಗ್​​ಸ್ಟನ್​(ಜಮೈಕಾ):ಕಿಂಗ್‌ಸ್ಟನ್‌ನಲ್ಲಿ ನಡೆದ ಅಂಧರ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಜಮೈಕಾ ವಿರುದ್ಧ 10 ವಿಕೆಟ್‌ಗಳ ಜಯ ದಾಖಲಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಜಮೈಕಾ ತಂಡವು 2 ಓವರ್‌ಗಳಲ್ಲಿ 9/3 ಕ್ಕೆ ರನ್ ದಾಖಲಿಸಿತ್ತು. ಎರಡನೇ ಓವರ್ ನಲ್ಲಿ ಭಾರತ ತಂಡದ ದೀಪಕ್ ಮಲಿಕ್ 3 ಆರಂಭಿಕ ವಿಕೆಟ್‌ಗಳನ್ನು ಉರುಳಿಸಿದರು.

ಇನ್ನು ಜಮೈಕಾ ತಂಡದ ಗ್ರಹಾಂ ಮತ್ತು ಗ್ರೆಗೊರಿ ಸ್ಟೀವರ್ಟ್ ನಾಲ್ಕನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ಆಡಿದರು. ಇದು ಜಮೈಕಾ ತಂಡಕ್ಕೆ 147 ರನ್‌ ಮೊತ್ತವನ್ನು ದಾಖಲಿಸಲು ನೆರವಾಯಿತು.

148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೆನ್ ಇನ್ ಬ್ಲೂ(ಭಾರತ ತಂಡ) ಕೊನೆಯವರೆಗೂ ತನ್ನ ವೇಗವನ್ನು ಉಳಿಸಿಕೊಳ್ಳುವ ಮೂಲಕ ಸರಣಿಯನ್ನು ತಮ್ಮದಾಗಿಸಿಕೊಂಡಿತು.

ಭಾರತದ ತಂಡದ ಓಪನರ್ ಸುನೀಲ್ ರಮೇಶ್ ಕೇವಲ 40 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಂದ್ಯಶ್ರೇಷ್ಠ: ಸುನಿಲ್ ರಮೇಶ್

ಅಂಕಗಳ ಸಂಕ್ಷಿಪ್ತ ವಿವರ:

ಜಮೈಕಾ: 20 ಓವರ್‌ಗಳಲ್ಲಿ 147/6

ಸ್ಟೀವರ್ಟ್ 51* (64), ಗ್ರಹಾಂ 32 (47)

ದೀಪಕ್ ಮಲಿಕ್ 4/25 ಜಾನ್ ಡೇವಿಡ್ 1/11

ಭಾರತ: 8.5 ಓವರ್‌ಗಳಲ್ಲಿ 149/0

ಸುನಿಲ್ ರಮೇಶ್ 101 * (40) ಅಜಯ್ 30 (21)

ಭಾರತ 10 ವಿಕೆಟ್‌ಗಳಿಂದ ಜಯ ಸಾಧಿಸಿತು.

ಪಂದ್ಯಶ್ರೇಷ್ಠ:ಸುನಿಲ್ ರಮೇಶ್

ABOUT THE AUTHOR

...view details