ಕರ್ನಾಟಕ

karnataka

ಬೇಡಿ-ಚೌಹಾಣ್​​ಗೆ ಮತ್ತೆ ಟಾಂಗ್​​​​​ ಕೊಟ್ಟ ಗೌತಿ

By

Published : Aug 5, 2019, 8:45 AM IST

ಹರಿಯಾಣ ಮೂಲದ ಆಟಗಾರರನನ್ನ ದೆಹಲಿ ತಂಡಕ್ಕೆ ಆಯ್ಕೆ ಮಾಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ ಎಂದು ಬಿಷನ್ ಸಿಂಗ್ ಬೇಡಿ ಗೌತಮ್​ ಗಂಭೀರ್ ಆರೋಪವನ್ನ ತಳ್ಳಿಹಾಕಿದ್ದಾರೆ.

ಗೌತಮ್​ ಗಂಭೀರ್

ನವದೆಹಲಿ: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ನವ್​ದೀಪ್ ಸೈನಿ ಮೊದಲ ಪಂದ್ಯದಲ್ಲೇ 3 ವಿಕೆಟ್​ ಪಡೆದು ಮಿಂಚಿದ್ದರು. ಈ ಸಂದರ್ಭದಲ್ಲಿ ಟ್ವೀಟ್​ ಮಾಡಿದ್ದ ಗಂಭೀರ್,​ ಸೈನಿ ಕ್ರಿಕೆಟ್​ ಜೀವನಕ್ಕೆ ಆರಂಭದಲ್ಲಿ ಮುಳುವಾಗಿದ್ದರೆಂದು ​ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್​ ಸಿಂಗ್ ಬೇಡಿ ಹಾಗೂ ಚೇತನ್​ ಚೌಹಾಣ್ ಕಾಲೆಳೆದಿದ್ದರು.

ಈ ಹಿಂದೆಯೇ ಸೈನಿ ಆಯ್ಕೆಗೆ ಮುಳುವಾಗಿದ್ದರು ಎಂದು ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್​ ಸಿಂಗ್ ಬೇಡಿ ಹಾಗೂ ಚೇತನ್​ ಚೌಹಾಣ್​ ಮೇಲೆ ಗೌತಿ​ ಆರೋಪ ಮಾಡಿದ್ದರು. ಆದರೆ ಗಂಭೀರ್ ಆರೋಪವನ್ನ ಬಿಷನ್ ಸಿಂಗ್ ಬೇಡಿ ತಳ್ಳಿಹಾಕಿದ್ದಾರೆ.

ಮತ್ತೊಬ್ಬರ ಗೆಲುವಿಗೆ ನಾನು ಮುಳುವಾಗಿದ್ದೆ ಎಂಬುದನ್ನ ನಂಬೋದಿಲ್ಲ. ಟ್ವಿಟರ್​ನಲ್ಲಿ ಬಂದ ಕಮೆಂಟ್​ಗೆ ಪ್ರತಿಕ್ರಿಯೆ ನೀಡೋದಿಲ್ಲ. ಆದರೆ ನಾನು ಎಂದೂ ನವ್​ದೀಪ್ ಸೈನಿ ಬಗ್ಗೆ ನಕಾರಾತ್ಮಕವಾಗಿ ಹೇಳಿಲ್ಲ ಎಂದಿದ್ದಾರೆ.

ಅಲ್ಲದೆ ಹರಿಯಾಣ ಮೂಲದ ಆಟಗಾರರನನ್ನ ದೆಹಲಿ ತಂಡಕ್ಕೆ ಆಯ್ಕೆ ಮಾಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ ಎಂದಿದ್ದಾರೆ. ಆ ಹುಡುಗ ಅದ್ಭುತ ಆಟಗಾರ. ನಾನು ಅವನನ್ನ ಟಿವಿಯಲ್ಲಿ ಮಾತ್ರ ನೋಡಿದ್ದೆ. ಅಲ್ಲದೆ ಸೈನಿ ಭಾರತದ ಪರ ಆಡಿರೋದು ಒಂದೇ ಒಂದು ಪಂದ್ಯ ಮಾತ್ರ. ಹೀಗಾಗಿ ನಾವು ಇನ್ನೂ ಸ್ವಲ್ಪ ದಿನ ಕಾಯಬೇಕು ಎಂದಿದ್ದಾರೆ.

ಇನ್ನು ಗೌತಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೇತನ್​ ಚೌಹಾಣ್, ಸೈನಿಯನ್ನ ರಣಜಿ ತಂಡಕ್ಕೆ ಆಯ್ಕೆ ಮಾಡುವಾಗ ನಿಯಮಗಳ ಪ್ರಕಾರ ನಡೆದುಕೊಂಡಿದ್ದೆ ಅಷ್ಟೆ ಎಂದಿದ್ದಾರೆ.

ಬಿಷನ್​ ಸಿಂಗ್ ಬೇಡಿ ಮತ್ತು ಚೇತನ್​ ಚೌಹಾಣ್ ಹೇಳಿಕೆಗೆ ಟ್ವಿಟರ್ ಮೂಲಕ ಟಾಂಗ್​ ಕೊಟ್ಟಿರುವ ಗೌತಿ, ಬಿಷನ್ ಸಿಂಗ್ ಬೇಡಿ ತನ್ನ ಅನರ್ಹ ಮಗನನ್ನ ಆಯ್ಕೆ ಮಾಡಲು ಮುಂದಾದವರು. ಚೇತನ್​ ಚೌಹಾಣ್ ತನ್ನ ಸೋದರ ಅಳಿಯನನ್ನ ದೆಹಲಿ ತಂಡಕ್ಕೆ ಆಯ್ಕೆ ಮಾಡುವಂತೆ ಡಿಡಿಸಿಎ ಮುಂದೆ ತಲೆಬಾಗಿದವರು. ನಾಚಿಕೆ ಆಗಬೇಕು ನಿಮಗೆ ಎಂದು ಕುಟುಕಿದ್ದಾರೆ.

ಸೈನಿ ಮೊದಲ ಓವರ್​ನಲ್ಲೇ ಎರಡು ವಿಕೆಟ್​ ಪಡೆಯುತ್ತಿದ್ದಂತೆ ಟ್ವೀಟ್​ ಮಾಡಿದ್ದ ಗಂಭೀರ್,​ "ಸೈನಿ ಭಾರತ ತಂಡದ ಪರ ನಿನ್ನ ಪದಾರ್ಪಣೆ ಅದ್ಭುತವಾಗಿತ್ತು. ಮೊದಲ ಓವರ್​ನಲ್ಲೇ 2 ವಿಕೆಟ್​ ಪಡೆದಿದ್ದೀಯ. ಈ ಪ್ರದರ್ಶನ ನೋಡಿ ಬಿಷನ್​ ಸಿಂಗ್​ ಬೇಡಿ ಹಾಗೂ ಚೇತನ ಶರ್ಮಾರಿಗೆ ತಕ್ಕ ಉತ್ತರ ಕೊಟ್ಟಂತಾಗಿದೆ. ನೀನು ಮೈದಾನಕ್ಕಿಳಿಯುವ ಮುನ್ನವೇ ನಿನ್ನನ್ನು ತುಳಿಯಲು ನೋಡಿದವರಿಗೆ ಅವಮಾನವಾಗಿದೆ" ಎಂದು ಟ್ವೀಟ್​ ಮೂಲಕ ಮಾಜಿ ಆಟಗಾರರ ಕಾಲೆಳೆದಿದ್ದರು.

ABOUT THE AUTHOR

...view details