ಕರ್ನಾಟಕ

karnataka

ETV Bharat / sports

ಗಾಯಗೊಂಡ ಪಕ್ಷಿ ರಕ್ಷಿಸಿದ ಜೀವಾ ’ಧೋನಿ’: ತಂದೆ ಮಗಳ ಮಾನವೀಯತೆಗೆ ಅಭಿಮಾನಿಗಳು ಸಲಾಂ - ಪಕ್ಷಿಯ ಜೀವ ಉಳಿಸಿದ ಧೋನಿ

ರಾಂಚಿಯಲ್ಲಿರುವ ತಮ್ಮ ಫಾರ್ಮ್​ಹೌಸ್​​ನಲ್ಲಿ ಮಂಗಳವಾರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಪರ್​ಸ್ಮಿತ್​ ಬಾರ್ಬೆಟ್​ ಹಕ್ಕಿಯನ್ನು ತಂದೆ ಮಗಳಿಬ್ಬರೂ ರಕ್ಷಿಸಿದ್ದಾರೆ.

ಪಕ್ಷಿಯ ಜೀವ ಉಳಿಸಿದ ಎಂಎಸ್​ ಧೋನಿ
ಪಕ್ಷಿಯ ಜೀವ ಉಳಿಸಿದ ಎಂಎಸ್​ ಧೋನಿ

By

Published : Jun 10, 2020, 9:07 AM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಹಾಗೂ ಅವರ ಮಗಳು ಜೀವಾ ಧೋನಿ ಗಾಯಗೊಂಡಿದ್ದ ಪಕ್ಷಿಯನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಂಚಿಯಲ್ಲಿರುವ ತಮ್ಮ ಫಾರ್ಮ್​ಹೌಸ್​​ನಲ್ಲಿ ಮಂಗಳವಾರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಪರ್​ಸ್ಮಿತ್​ ಬಾರ್ಬೆಟ್​ ಹಕ್ಕಿಯನ್ನು ತಂದೆ ಮಗಳಿಬ್ಬರು ರಕ್ಷಿಸಿದ್ದಾರೆ.

ಕೊರೊನಾ ಲಾಕ್​ಡೌನ್​ ಹಿನ್ನೆಲೆ ತಮ್ಮ ಫಾರ್ಮ್​ಹೌಸ್​ನಲ್ಲಿ ಧೋನಿ ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಮಂಗಳವಾರ ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಲು ಧೋನಿ ತಮ್ಮ ಮಗಳಿಗೆ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಫೋಟೋ ಸಹಿತ ಜೀವಾ ಇನ್​​ಸ್ಟಾಗ್ರಾಂ ನಿರ್ವಹಣೆ ಮಾಡುವವರು ಶೇರ್​ ಮಾಡಿದ್ದಾರೆ.

ತಮ್ಮ ಮಗಳು ನೋಡಿದ ಆ ಅರೆಜೀವದ ಪಕ್ಷಿಯನ್ನು ಧೋನಿ ಮತ್ತು ಸಾಕ್ಷಿ ನೀರು ಕುಡಿಸಿ ಉಸಿರಾಡುವಂತೆ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲಿ ಚೇತರಿಸಿಕೊಂಡ ಪಕ್ಷಿ ಅಲ್ಲಿಂದ ಹಾರಿಹೋಗಿದೆ.

"ಈ ದಿನ ಸಂಜೆ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಂದು ಪಕ್ಷಿಯನ್ನು ನಾನು ಕಂಡೆ. ತಕ್ಷಣ ಅಪ್ಪ - ಅಮ್ಮನನ್ನು ಕೂಗಿದೆ. ಅಪ್ಪ ಪಕ್ಷಿಯನ್ನು ಎತ್ತಿಕೊಂಡು ಸ್ವಲ್ಪ ನೀರು ಕುಡಿಸಿದರು. ಅದಾದ ಕೆಲವು ಸಮಯದ ನಂತರ ಪಕ್ಷಿ ಕಣ್ಣು ತೆರೆಯಿತು. ಇದನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು. ನಾವು ಬುಟ್ಟಿಯಲ್ಲಿ ಕೆಲವು ಎಲೆಗಳಿಟ್ಟು ಅದರಲ್ಲಿ ಪಕ್ಷಿಯನ್ನು ಇರಿಸಿದೆವು. ಅಮ್ಮ ಅದನ್ನು ಕ್ರಿಮ್ಸನ್​ ಬ್ರೆಸ್ಟೆಡ್​ ಬಾರ್ಬೆಟ್​ ಅಥವಾ ಕಾಪರ್​ಸ್ಮಿತ್​ ಎಂದು ಹೇಳಿ ಹೇಳಿದರು" ಎಂದು ಬರೆದು ಜೀವಾ ಇನ್​ಸ್ಟಾಗ್ರಾಮ್​ನಿಂದ ನಡೆದ ಘಟನೆಯ ವಿವರ ನೀಡಲಾಗಿದೆ.

"ಎಂತಹ ಸುಂದರ ಹಕ್ಕಿ, ನಾನು ಅದರ ಜೊತೆ ಇರಬೇಕು ಎಂದು ಬಯಿಸಿದ್ದೆ, ಅದರೆ ಮಮ್ಮ ಪಕ್ಷಿ ಕೂಡ ಅದರ ಅಮ್ಮನ ಬಳಿ ಹೋಗಲಿ ಬಿಡು ಎಂದು ಹೇಳಿದರು, ನಾನು ಮತ್ತೆ ಖಂಡಿತ ಅದನ್ನು ನೋಡುತ್ತೇನೆ" ಎಂದು ಜೀವಾ ಇನ್ಸ್ಟಾ ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಇದೇ ಫೋಟೋವನ್ನು ಚೆನ್ನೈ ಸೂಪರ್​ ಕಿಂಗ್ಸ್​ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲೂ ಶೇರ್​ ಮಾಡಿಕೊಂಡಿದೆ

ABOUT THE AUTHOR

...view details