ಗಯಾನ:ಭಾರತದ ವಿರುದ್ಧದ ಟೆಸ್ಟ್ ಸರಣಿಗೆ 140 ಕೆಜಿ ತೂಕ, 6.6 ಅಡಿ ಎತ್ತರವಿರುವ ರಖೀಮ್ ಕಾರ್ನ್ವಲ್ ಅಯ್ಕೆಯಾಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಕ್ರಿಕೆಟ್ ಲೋಕದಲ್ಲೇ ಅತ್ಯಂತ ಹೆಚ್ಚು ತೂಕದ ವ್ಯಕ್ತಿಯಾಗಿರುವ ಕಾರ್ನ್ವಲ್ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕಾರ್ನ್ವಲ್ ಅವರ ದೇಹದ ತೂಕವನ್ನು ಲೆಕ್ಕಿಸದೆ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದು, 55 ಪ್ರಥಮ ದರ್ಜೆ ಪಂದ್ಯಗಳಿಂದ 2,234 ರನ್ ಬಾರಿಸಿದ್ದಾರೆ. ಬೌಲಿಂಗ್ನಲ್ಲಿ 260 ವಿಕೆಟ್ ಪಡೆದಿದ್ದಾರೆ.
ವಿಂಡೀಸ್ ಎ ತಂಡದ ಪರ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದ ಕಾರ್ನ್ವಲ್ ಮೊದಲೆರಡು ಟೆಸ್ಟ್ಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅಲ್ಲದೆ 4 ವಿಕೆಟ್ ಕೂಡ ಪಡೆದಿದ್ದರು. ಇನ್ನು ಏಕದಿನ ಸರಣಿಯಲ್ಲಿ ಆಡಿದ ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದಿದ್ದರು.
ರಖೀಮ್ ದೀರ್ಘ ಸಮಯದಿಂದಲೂ ಸ್ಥಿರ ಪ್ರದರ್ಶನ ತೋರುವ ಮೂಲಕ ಅವರೊಬ್ಬ ಮ್ಯಾಚ್ ವಿನ್ನರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಇಲ್ಲೂ ಕೂಡ ಅವರ ಪ್ರದರ್ಶನ ಮುಂದುವರಿಯಲಿದೆ ಎಂದು ಭಾವಿಸಿದ್ದೇವೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ರಾಬರ್ಟ್ಹೇನ್ಸ್ ತಿಳಿಸಿದ್ದಾರೆ.