ಮೆಲ್ಬೋರ್ನ್:ಇದುವರೆಗೂ ಎಲ್ಲ ಟಿ20 ಲೀಗ್ಗಳಲ್ಲೂ ಮೊದಲ ನಾಲ್ಕು ತಂಡಗಳು ಅಥವಾ ಮೂರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದವು. ಆದರೆ, ಬಿಬಿಎಲ್ ಮೊದಲ 5 ತಂಡಗಳಿಗೆ ಅನುಕೂಲವಾಗುವಂತೆ ಹೊಸ ಪದ್ಧತಿಯನ್ನು ಪರಿಚಯಿಸುತ್ತಿದೆ.
ಟಿ-20 ಇತಿಹಾಸದಲ್ಲಿ ಮೊದಲ ಪ್ರಾಂಚೈಸಿ ಲೀಗ್ ಆದ ಐಪಿಎಲ್ನಲ್ಲಿ ಎಲಿಮಿನೇಟರ್, ಕ್ವಾಲಿಫೈಯರ್ ಪದ್ದತಿಯಿದೆ. ಅಲ್ಲಿ ಮೊದಲೆರಡು ತಂಡಗಳು ಫೈನಲ್ಗೇರಲು ಎರಡು ಅವಕಾಶವಿರುತ್ತದೆ. ಮೂರು-ನಾಲ್ಕನೇ ತಂಡಗಳು ಫೈನಲ್ಗೆ ಏರಲು ಎರಡು ಪಂದ್ಯಗಳನ್ನು ಆಡಬೇಕಿರುತ್ತದೆ.
ಕೆಲವು ಲೀಗ್ಗಳಲ್ಲಿ ನಾಕೌಟ್ ಪದ್ದತಿಯಿರುತ್ತದೆ. ಮೊದಲ ನಾಲ್ಕು ತಂಡಗಳು ಸೆಮಿಫೈನಲ್ ಪಂದ್ಯವನ್ನಾಡಿ, ಅಲ್ಲಿ ಗೆದ್ದ ತಂಡಗಳು ಫೈನಲ್ ಆಡಲಿವೆ. ಆದರೆ ಬಿಬಿಎಲ್ ಇದೇ ಮೊದಲ ಬಾರಿಗೆ 5 ತಂಡಗಳು ಕ್ವಾಲಿಫೈಯರ್ ಹಂತದಲ್ಲಿ ಆಡಲು ಅವಕಾಶ ಒದಗಿಸುತ್ತಿದೆ.
ಎಲಿಮಿನೇಟರ್: 4 ಮತ್ತು 5ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿದೆ.