ಅಡಿಲೇಡ್: ಬಿಗ್ಬ್ಯಾಶ್ ಲೀಗ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಬ್ಯಾಟ್ಸ್ಮನ್ ಜ್ಯಾಕ್ ವೆದರ್ಲ್ಯಾಂಡ್ ಸ್ಟ್ರೈಕ್ ಮತ್ತು ನಾನ್ ಸ್ಟ್ರೈಕ್ ಎರಡೂ ಕಡೆ ವಿಲಕ್ಷಣ ರೀತಿಯಲ್ಲಿ ರನ್ ಔಟ್ ಆಗುವ ಮೂಲಕ ಟ್ರೋಲ್ ಆಗುತ್ತಿದ್ದಾರೆ.
ಸಿಡ್ನಿ ಥಂಡರ್ ವಿರುದ್ಧ ನಡೆದ ಪಂದ್ಯದಲ್ಲಿ 10ನೇ ಓವರ್ರಲ್ಲಿ ಈ ಘಟನೆ ನಡಿದಿದೆ. ಕ್ರಿಸ್ ಗ್ರೀನ್ ಬೌಲಿಂಗ್ನಲ್ಲಿ ಅಡಿಲೇಡ್ ತಂಡದ ಪೀಟರ್ ಸಾಲ್ಟ್ ಚೆಂಡನ್ನು ಸ್ಟ್ರೇಟ್ ಡ್ರೈವ್ ಮಾಡಿದರು. ಗ್ರೀನ್ ಆ ಚೆಂಡನ್ನು ತಡೆಯುವ ಪ್ರಯತ್ನ ಮಾಡಿದರು. ಅವರ ಬೆರಳಿಗೆ ಬಿದ್ದ ಚೆಂಡು ನೇರವಾಗಿ ಸ್ಟಂಪ್ಗೆ ಅಪ್ಪಳಿಸಿತು. ಆಷ್ಟರಲ್ಲಿ ವೆದರ್ಲ್ಯಾಂಡ್ ಕ್ರೀಸ್ ಬಿಟ್ಟಿದ್ದರಿಂದ ಗ್ರೀನ್ ರನ್ಔಟ್ಗೆ ಅಪೀಲ್ ಮಾಡಿದರು.
ಮತ್ತೆ ಚೆಂಡು ಸ್ಟಂಪ್ಗೆ ಬಡಿದ ನಂತರ ಪೀಟರ್ ಸಾಲ್ಟ್ ಒಂದು ರನ್ಗಾಗಿ ಕರೆ ಮಾಡಿದರು. ವೆದರ್ಲ್ಯಾಂಡ್ ಮತ್ತೆ ಓಡಿದರು. ಆದರೆ ಫೀಲ್ಡರ್ ಕೀಪರ್ಗೆ ಚೆಂಡನ್ನು ಸರಿಯಾದ ಸಮಯಕ್ಕೆ ನೀಡಿದ್ದರಿಂದ ಅಲ್ಲೂ ಕೂಡ ಕ್ರೀಸ್ ಮುಟ್ಟುವಲ್ಲಿ ಅವರು ವಿಫಲರಾದರು. ಮೂರನೇ ಅಂಪೈರ್ ಟಿವಿ ರೀಪ್ಲೇ ವೀಕ್ಷಿಸಿದಾಗ ವೆದರ್ಲ್ಯಾಂಡ್ ಎರಡೂ ಕಡೆ ರನ್ಔಟ್ ಆಗಿರುವುದು ಸ್ಪಷ್ಟವಾಗಿತ್ತು.
ಅದಾಗ್ಯೂ ಒಬ್ಬ ಬ್ಯಾಟ್ಸ್ಮನ್ ಒಂದೇ ಎಸೆತದಲ್ಲಿ ಎರಡು ಬಾರಿ ಔಟ್ ಆಗುವುದು ಆಸಾಧ್ಯವಾಗಿರುವುದರಿಂದ ನಾನ್ಸ್ಟ್ರೈಕರ್ ಕೊನೆಯಲ್ಲಿ ಗ್ರೀನ್ ಸಾಹಸದಿಂದ ರನ್ ಔಟ್ ಆಗಿದ್ದನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ 159 ರನ್ ಗಳಿಸಿದರೆ, ಇದನ್ನು ಹಿಂಬಾಲಿಸಿದ ಸಿಡ್ನಿ ಥಂಡರ್ 153 ರನ್ಗಳನ್ನಷ್ಟೇ ಗಳಿಸಿಲು ಶಕ್ತವಾಗಿ 6 ರನ್ಗಳ ಸೋಲು ಕಂಡಿತು.