ನವದೆಹಲಿ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು, ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಸ್ಮೃತಿ ಮಂದಾನ ಹಾಗೂ ಜೆಮಿಮಾ ರೊಡ್ರಿಗಸ್ ಅವರ ಜೊತೆ ಯೂ ಟ್ಯೂಬ್ ಶೋ ಒಂದರಲ್ಲಿ ಉತ್ತರಿಸಿದ್ದಾರೆ.
ತಮ್ಮ ದೇಶಿಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ 2008-09ರ ಸಾಲಿನ ರಣಜಿ ಸೀಸನ್ನಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟ್ ಆಗಿದ್ದರು. ಈ ವಿಕೇಟ್ ಪಡೆದದ್ದು 19 ವರ್ಷದ ಭುವನೇಶ್ವರ್ ಕುಮಾರ್. ಇದಾದ ನಾಲ್ಕು ವರ್ಷದ ನಂತರ, ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ಹಫೀಜ್ ಅವರನ್ನು ತಾವು ಎಸೆದ ಮೊದಲ ಎಸೆತದಲ್ಲೆ ಔಟ್ ಮಾಡುವ ಮೂಲಕ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಭುವನೇಶ್ವರ್ ರಣಜಿ ಪಂದ್ಯದಲ್ಲಿ ತಾವು ಸಚಿನ್ ಅವರನ್ನು ಔಟ್ ಮಾಡಿರುವ ಶ್ರೇಯಸ್ಸನ್ನು ಅಂದಿನ ಉತ್ತರ ಪ್ರದೇಶದ ನಾಯಕನಾಗಿದ್ದ ಮೊಹಮ್ಮದ್ ಕೈಫ್ ಅವರಿಗೆ ನೀಡುತ್ತಾರೆ. ಮಂದಾನಾ ಮತ್ತು ಜೆಮಿಮಾ ರೊಡ್ರಿಗಸ್ ಪ್ರಶ್ನೆಗೆ ಉತ್ತರಿಸದ ಭುವಿ, ಸಾಮಾನ್ಯವಾಗಿ ಆಟ ಪ್ರಾರಂಭವಾಗುವುದಕ್ಕೆ ಮೊದಲು ವಿಕೆಟ್ ಪಡೆಯಲು ಯೋಚಿಸುತ್ತೇನೆ. ಆದರೆ, ಅದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ ಎಂದರು.
ಆದರೆ, ಸಚಿನ್ ವಿಷಯಕ್ಕೆ ಬಂದಾಗ ನಾನು ಅದೃಷ್ಟಶಾಲಿ. ಏಕೆಂದರೆ ಸಚಿನ್ ಔಟ್ ಮಾಡಿದ ಬಾಲ್ ಶಾರ್ಟ್ ಲೆಗ್ ಅಥವಾ ಮಿಡ್-ವಿಕೆಟ್ ಆಗಿರಲಿಲ್ಲ. ಆದ್ದರಿಂದ ವಿಕೆಟ್ ಪಡೆದೆ. ಆ ಶ್ರೆಯಸ್ಸನ್ನು ಆಗಿನ ನನ್ನ ನಾಯಕನಾಗಿದ್ದ ಮೊಹಮ್ಮದ್ ಕೈಫ್ಗೆ ನೀಡುತ್ತೇನೆ ಎಂದರು.
ಏಕೆಂದರೆ ಕೈಫ್ ಫೀಲ್ಡ್ ಸೆಟ್ ಮಾಡಿದ್ದರು. ನಾನು ಇನ್ಸ್ವಿಂಗ್ ಬೌಲ್ ಮಾಡಿದೆ. ಹೀಗಾಗಿ, ವಿಕೆಟ್ ಪಡೆಯಲು ಸಾಧ್ಯವಾಯ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.