ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಂಗಳವಾರ ಸಿಎಸ್ಕೆ ವಿರುದ್ಧ ಸಂಜು ಸಾಮ್ಸನ್ ಸ್ಫೋಟಕ ಬ್ಯಾಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಜು ಪ್ರಸ್ತುತ ಭಾರತದ ಅತ್ಯುತ್ತಮ ಯುವ ಬ್ಯಾಟ್ಸ್ಮನ್ ಎಂದು ಬಣ್ಣಿಸಿದ್ದಾರೆ.
ರಾಯಲ್ಸ್ 11ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಸಂಜು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟಾರೆ 32 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 74 ರನ್ಗಳಿಸಿ 12ನೇ ಓವರ್ರನಲ್ಲಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.
ಸಂಜು ಅವರನ್ನು ಕಳೆದ ಎರಡು ವರ್ಷಗಳಿಂದ ಬೆಂಬಲಿಸುತ್ತಾ ಬಂದಿರುವ ಗೌತಮ್ ಗಂಭೀರ್, ಸಂಜು ಸಾಮ್ಸನ್ ಕೇವಲ ಬೆಸ್ಟ್ ವಿಕೆಟ್ ಕೀಪರ್ ಮಾತ್ರವಲ್ಲ, ಪ್ರಸ್ತುತ ಯುವ ಬ್ಯಾಟ್ಸ್ಮನ್ಗಳಲ್ಲಿ ಅತ್ಯುತ್ತಮರಾಗಿದ್ದಾರೆ ಎಂದಿದ್ದಾರೆ.
" ಸಂಜು ಸಾಮ್ಸನ್ ಕೇವಲ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಾತ್ರವಲ್ಲ, ಅವರು ಭಾರತದ ಅತ್ಯುತ್ತಮ ಯುವ ಬ್ಯಾಟ್ಸ್ಮನ್! ಯಾರಾದರೂ ನನ್ನ ಜೊತೆ ವಾದ ಮಾಡುತ್ತೀರಾ? "ಎಂದು ಸಂಜುವನ್ನು ಕೊಂಡಾಡಿದ್ದಾರೆ.
ಸಂಜು ಸಾಮ್ಸನ್ ಹೊರತು ಪಡಿಸಿದರೆ ನಾಯಕ ಸ್ಟಿವ್ ಸ್ಮಿತ್ ಕೂಡ 69 ರನ್ ಸಿಡಿಸಿದರು. ಜೊತೆಗೆ ಕೊನೆಯಲ್ಲಿ ಆರ್ಚರ್ 8 ಎಸೆತಗಳಲ್ಲಿ 27 ರನ್ ಸಿಡಿಸಿ ತಂಡದ ಮೊತ್ತವನ್ನು216ಕ್ಕೆ ಏರಿಸಿದ್ದರು.