ಕೋಲ್ಕತಾ:ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ತನ್ನ ಕಚೇರಿಯನ್ನು ಮಂಗಳವಾರದಿಂದ 5 ದಿನಗಳ ಕಾಲ ಬಂದ್ ಮಾಡಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ತಿಳಿಸಿದೆ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಈ ನಿರ್ಧಾರಕ್ಕೆ ಬರಲಾಗಿದೆ.
ಬಾಗಿಲು ಮುಚ್ಚಿದ ಬಂಗಾಳ ಕ್ರಿಕೆಟ್ ಅಸೋಸಿಯೇಷನ್: ಮನೆಯಿಂದ ಕೆಲಸ ಮಾಡಲಿದ್ದಾರೆ ಸಿಬ್ಬಂದಿ - ಬಾಗಿಲು ಮುಚ್ಚಿದ ಬಂಗಾಳ ಕ್ರಿಕೆಟ್ ಅಸೋಸಿಯೇಶನ್
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ತನ್ನ ಕಚೇರಿಯನ್ನು ಮಂಗಳವಾರದಿಂದ 5 ದಿನಗಳ ಕಾಲ ಬಂದ್ ಮಾಡಲಿದೆ.

ಬಂಗಾಳ ಕ್ರಿಕೆಟ್ ಅಸೋಸಿಯೇಶನ್
'ಕೋವಿಡ್ ಸೋಂಕು ಹರಡದಂತೆ ತಡೆಯಲು ಕಚೇರಿಯಲ್ಲಿ ಸಿಬ್ಬಂದಿ ಜಮಾವಣೆ ಆಗುವುದನ್ನು ತಡೆಯಬೇಕಿದೆ. ಹೀಗಾಗಿ ಮಂಗಳವಾರದಿಂದ ಶನಿವಾರದವರೆಗೆ ಮುಂಜಾಗರೂಕತಾ ಕ್ರಮವಾಗಿ ಕಚೇರಿಯನ್ನು ಮುಚ್ಚಿದ್ದೇವೆ.' ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ದೇಬಬ್ರತಾ ದಾಸ್ ತಿಳಿಸಿದರು.
'ಆದಾಗ್ಯೂ ತೀರಾ ಅವಶ್ಯಕ ತುರ್ತು ಪರಿಸ್ಥಿತಿ ಎದುರಾದಲ್ಲಿ ಕೆಲಸ ಮಾಡಲು ಸಿಬ್ಬಂದಿಯನ್ನು ಕಚೇರಿಗೆ ಕರೆಸಬಹುದು. ಸದ್ಯ ಮನೆಯಿಂದಲೇ ಕೆಲಸ ಮಾಡುವ ಎಲ್ಲ ಸಿಬ್ಬಂದಿ ದೂರವಾಣಿ, ಇಮೇಲ್ ಹಾಗೂ ಇನ್ನಿತರ ಸಾಧನಗಳ ಮೂಲಕ ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲಿದ್ದಾರೆ.' ಎಂದು ದಾಸ್ ನುಡಿದರು.