ಮ್ಯಾಂಚೆಸ್ಟರ್ :ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿರುವ ಬೆನ್ಸ್ಟೋಕ್ಸ್ ವಿಶೇಷ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ ಶತಕ(176) ರನ್ಗಳಿಸಿದ್ದ ಬೆನ್ಸ್ಟೋಕ್ಸ್ 2ನೇ ಇನ್ನಿಂಗ್ಸ್ನಲ್ಲಿ ಕೇವಲ 57 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸುವ ಮೂಲಕ 78 ರನ್ ಸಿಡಿಸಿ 312 ರನ್ಗಳ ಬೃಹತ್ ಟಾರ್ಗೆಟ್ ನೀಡಲು ನೆರವಾಗಿದ್ದರು.
ಆದರೆ, ಇದೇ ಇನ್ನಿಂಗ್ಸ್ನಲ್ಲಿ ಒಂದು ವಿಶೇಷ ದಾಖಲೆಗೂ ಸ್ಟೋಕ್ಸ್ ಪಾತ್ರರಾಗಿದ್ದಾರೆ. 2ನೇ ಇನ್ನಿಂಗ್ಸ್ನಲ್ಲಿ 3 ಸಿಕ್ಸರ್ ಸಿಡಿಸಿರುವ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಬೆನ್ ಸ್ಟೋಕ್ಸ್ 65 ಪಂದ್ಯಗಳಲ್ಲಿ 74 ಸಿಕ್ಸ್ ಸಿಡಿಸಿದ್ದಾರೆ.
ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಸಕ್ರಿಯ ಕ್ರಿಕೆಟಿಗರು
- ಬೆನ್ಸ್ಟೋಕ್ಸ್ 74
- ಟಿಮ್ ಸೌಥಿ 72
- ಏಂಜೆಲೋ ಮ್ಯಾಥ್ಯೂಸ್ 61
- ಡೇವಿಡ್ ವಾರ್ನರ್ 56
- ರೋಹಿತ್ ಶರ್ಮಾ 52
- ರಾಸ್ ಟೇಲರ್ 52
- ರವೀಂದ್ರ ಜಡೇಜಾ 50
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್
- ಬ್ರೆಂಡನ್ ಮೆಕ್ಕಲಮ್ 107
- ಆ್ಯಡಂ ಗಿಲ್ಕ್ರಿಸ್ಟ್ 100
- ಕ್ರಿಸ್ ಗೇಲ್ 98
- ಜಾಕ್ ಕಾಲೀಸ್ 97
- ವಿರೇಂದ್ರ ಸೆಹ್ವಾಗ್ 91
- ಬ್ರಿಯಾನ್ ಲಾರಾ 88