ಕರ್ನಾಟಕ

karnataka

ETV Bharat / sports

ಪಾಕ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಅರ್ಧದಲ್ಲೇ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಸ್ಟೋಕ್ಸ್​ - ಬೆನ್​ ಸ್ಟೋಕ್ಸ್​ ನ್ಯೂಜಿಲ್ಯಾಂಡ್​ಗೆ ಕಮ್​ಬ್ಯಾಕ್​

ಸ್ಟೋಕ್ಸ್ ತನ್ನ ಕುಟುಂಬದೊಂದಿಗೆ ಇರಲು ತನ್ನ ತವರೂರಾದ ಕ್ರೈಸ್ಟ್‌ಚರ್ಚ್‌ಗೆ ಮರಳಿದ್ದಾರೆ. ಈ ವೇಳೆ ಎರಡು ವಾರಗಳ ಕ್ವಾರಂಟೈನಲ್ಲಿರುವಾಗ ಮಾಧ್ಯಮದೊಂದಿಗೆ ಮಾತನಾಡಿದ್ದು ತಂದೆಗೆ ಬ್ರೈನ್​ ಕಾನ್ಸರ್​ ಇರುವುದು ತಿಳಿದ ಮೇಲೆ ತಮಗೆ ತಂಡವನ್ನು ಬಿಟ್ಟು ಬರದೆ ಬೇರೆ ದಾರಿ ಇರಲಿಲ್ಲ ಎಂದು ತಿಳಿಸಿದ್ದಾರೆ.

Ben stokes
ಬೆನ್​ ಸ್ಟೋಕ್ಸ್​

By

Published : Aug 29, 2020, 12:25 PM IST

ಲಂಡನ್: ವಿಂಡೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಪ್ರಮುಖ ಪಾತ್ರವಹಿಸಿದ್ದ ಸ್ಟೋಕ್ಸ್​ ಪಾಕ್​ ವಿರುದ್ಧದ ಕೇವಲ ಒಂದೇ ಪಂದ್ಯವನ್ನಾಡಿ ಸರಣಿಯಿಂದ ಹೊರ ಬಂದಿರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.

ಮೊದಲ ಪಂದ್ಯದ ಜಯದ ನಂತರ ದಿಢೀರ್​ ತಂಡದಿಂದ ಹೊರಬಂದಿದ್ದ ಸ್ಟೋಕ್ಸ್​ ವೈಯಕ್ತಿಕ ಕಾರಣದಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ತಾವೂ ಸರಣಿಯಿಂದ ಹೊರಬಂದಿದ್ದಕ್ಕೆ ತಮ್ಮ ತಂದೆಗೆ ಬ್ರೈನ್​ ಕ್ಯಾನ್ಸ್​ರ ಇರುವುದು ತಿಳಿದಿದ್ದರಿಂದ ಮಾನಿಸಿಕವಾಗಿ ಸದೃಡರಾಗಿರಲು ಟೂರ್ನಿಯಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ.

ಸ್ಟೋಕ್ಸ್ ತನ್ನ ಕುಟುಂಬದೊಂದಿಗೆ ಇರಲು ತನ್ನ ತವರೂರಾದ ಕ್ರೈಸ್ಟ್‌ಚರ್ಚ್‌ಗೆ ಮರಳಿದ್ದಾರೆ. ಈ ವೇಳೆ ಎರಡು ವಾರಗಳ ಕ್ವಾರಂಟೈನಲ್ಲಿರುವಾಗ ಮಾಧ್ಯಮದೊಂದಿಗೆ ಮಾತನಾಡಿದ್ದು ತಂದೆಗೆ ಬ್ರೈನ್​ ಕಾನ್ಸರ್​ ಇರುವುದು ತಿಳಿದ ಮೇಲೆ ತಮಗೆ ತಂಡವನ್ನು ಬಿಟ್ಟು ಬರದೆ ಬೇರೆ ದಾರಿ ಇರಲಿಲ್ಲ ಎಂದು ತಿಳಿಸಿದ್ದಾರೆ.

" ಟೆಸ್ಟ್ ಸರಣಿಯ ವೇಳೆ ನಾನು ಒಂದು ವಾರ ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನ ತಲೆಯಲ್ಲಿ ತಂದೆಗೆ ಕ್ಯಾನ್ಸರ್​ ಇರುವ ವಿಚಾರ ಇದ್ದಿದ್ದರಿಂದ ಆಟದ ಬಗ್ಗೆ ಗಮನ ನೀಡಲಾಗಲಿಲ್ಲ. ಹೀಗಾಗಿ ಸರಣಿ ಕೈಬಿಟ್ಟಿದ್ದು ನನ್ನ ಮಾನಸಿಕ ವಿಚಾರದ ದೃಷ್ಟಿಯಿಂದ ಸರಿಯಾದ ನಿರ್ಧಾರವಾಗಿತ್ತು" ಎಂದು ಸ್ಟೋಕ್ಸ್ ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ತಂಡ ಮಾಜಿ ರಗ್ಬಿ ಆಟಗಾರರಾಗಿರುವ ಗೆರಾರ್ಡ್​​ ಸ್ಟೋಕ್ಸ್​ ಇಂಗ್ಲೆಂಡ್​ ರಗ್ಬಿ ಲೀಗ್​ ತಂಡದ ಪರ ದಶಕಗಳಿಗೂ ಹೆಚ್ಚು ಕಾಲ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಸ್ಟೋಕ್ಸ್​ ಕೂಡ 12 ವರ್ಷದ ನಂತರ ಇಂಗ್ಲೆಂಡ್​ನಲ್ಲಿ ವಾಸವಿದ್ದರು.

ಇತ್ತೀಚೆಗೆ ಮುಗಿದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಬಂದ ನಂತರ ಗೆರಾಲ್ಡ್​ ಸ್ಟೋಕ್ಸ್​ಗೆ ಆರೋಗ್ಯ ಹದಗೆಟ್ಟಿರುವುದು ತಿಳಿದುಬಂದಿತ್ತು.

ABOUT THE AUTHOR

...view details