ಕರ್ನಾಟಕ

karnataka

ETV Bharat / sports

ಬೆನ್​ ಸ್ಟೋಕ್ಸ್​ ತಮ್ಮ ತಂಡದಲ್ಲಿರಬೇಕೆಂದು ಎಲ್ಲಾ ನಾಯಕರು ಬಯಸುತ್ತಾರೆ: ಸ್ಟೀವ್​ ಸ್ಮಿತ್​ - ರಾಜಸ್ಥಾನ್​ ರಾಯಲ್ಸ್​

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ವೈಟ್​ಬಾಲ್​ ಸರಣಿಯಲ್ಲಿ ಬೆನ್ ​ಸ್ಟೋಕ್ಸ್​ ತಮ್ಮ ಎ ಕ್ಲಾಸ್​ ಆಟವನ್ನು ತೋರುವುದಿಲ್ಲ ಎಂದು ಆಶಿಸುತ್ತಿದ್ದೇನೆ. ಏಕೆಂದರೆ ಅವರು ಯುಎಇನಲ್ಲಿ ನಡೆಯಲಿರುವ ಐಪಿಎಲ್​ನಲ್ಲಿ ರಾಯಲ್ಸ್​ ಜರ್ಸಿಯಲ್ಲಿ ಅಬ್ಬರಿಸಲು ತಮ್ಮ ಅತ್ಯುತ್ತಮ ಶಕ್ತಿಯನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸ್ಮಿತ್​ ಹೇಳಿದ್ದಾರೆ.

ಐಪಿಎಲ್​ 2020
ಬೆನ್ ಸ್ಟೋ್ಕ್ಸ್​ ಮತ್ತು ಸ್ಟಿವ್​ ಸ್ಮಿತ್​

By

Published : Aug 1, 2020, 12:35 PM IST

ನವದೆಹಲಿ: ತಂಡ ಸಂಕಷ್ಟದಲ್ಲಿದ್ದಾಗ ನೆರವಾಗಬೇಕೆಂಬ ಮನೋಭಾವನೆ ಬೆನ್​ ಸ್ಟೋಕ್ಸ್​ನಂತಹ ಆಲ್​ರೌಂಡರ್​​ನಲ್ಲಿರುವುದರಿಂದಲೇ ಎಲ್ಲಾ ತಂಡದ ನಾಯಕರು ಅವರನ್ನು ತಮ್ಮ ತಂಡದಲ್ಲಿರಬೇಕು ಎಂದು ಬಯಸುತ್ತಾರೆ ಎಂದು ರಾಜಸ್ಥಾನ್​ ರಾಯಲ್ಸ್​ ತಂಡದ ನಾಯಕ ಬೆನ್​ ಸ್ಟೋಕ್ಸ್​ ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ವೈಟ್​ಬಾಲ್​ ಸರಣಿಯಲ್ಲಿ ಬೆನ್​ಸ್ಟೋಕ್ಸ್​ ತಮ್ಮ ಎ ಕ್ಲಾಸ್​ ಆಟವನ್ನು ತೋರುವುದಿಲ್ಲ ಎಂದು ಆಶಿಸುತ್ತಿದ್ದೇನೆ. ಏಕೆಂದರೆ ಅವರು ಯುಎಇನಲ್ಲಿ ನಡೆಯಲಿರುವ ಐಪಿಎಲ್​ನಲ್ಲಿ ರಾಯಲ್ಸ್​ ಜರ್ಸಿಯಲ್ಲಿ ಅಬ್ಬರಿಸಲು ತಮ್ಮ ಅತ್ಯುತ್ತಮ ಶಕ್ತಿಯನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸ್ಮಿತ್​ ಹೇಳಿದ್ದಾರೆ.

ಇನ್ನು ತಾವು ಮುಂದಿನ ಸರಣಿಯಲ್ಲಿ ತಮ್ಮ ರಾಯಲ್ಸ್​ ಟೀಂಮೇಟ್​ಗಳಾದ ಜೋಫ್ರಾ ಆರ್ಚರ್​, ಜೋಶ್​ ಬಟ್ಲರ್​, ಬೆನ್​ ಸ್ಟೋಕ್ಸ್​ ವಿರುದ್ಧ ಆಡುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ.

ಬೆನ್ ಸ್ಟೋ್ಕ್ಸ್​ ಮತ್ತು ಸ್ಟೀವ್​ ಸ್ಮಿತ್​

"ಇಂಗ್ಲೆಂಡ್​ನಂತಹ ಅದ್ಭುತ ತಂಡದಲ್ಲಿರುವ ನನ್ನ ಐಪಿಎಲ್​ ಸಹ ಆಟಗಾರರ ವಿರುದ್ಧ ಕೆಲವು ಸ್ಪರ್ಧಾತ್ಮಕ ಕ್ರಿಕೆಟ್​ ಪಂದ್ಯಗಳನ್ನಾಡಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಎನ್ನಿಸುತ್ತಿದೆ. ಅವರು(ಐಪಿಎಲ್​ ಟೀಂಮೇಟ್ಸ್​) ನಮ್ಮ ತಂಡದ(ಆಸ್ಟ್ರೇಲಿಯಾ) ವಿರುದ್ಧ ಹೆಚ್ಚು ರನ್​ ಹಾಗೂ ಹೆಚ್ಚು ವಿಕೆಟ್​ ಪಡೆಯುವುದಿಲ್ಲ ಎಂದು ಭಾವಿಸಿದ್ದೇನೆ. ಏಕೆಂದರೆ ಅವರು ತಮ್ಮ ಸಾಮರ್ಥ್ಯವನ್ನು ಐಪಿಎಲ್​ನಲ್ಲಿ ತೋರಿಸಲು ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ" ಎಂದು ರಾಜಸ್ಥಾನ ರಾಯಲ್ಸ್​ನ ಪೇಜ್​ನಲ್ಲಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಆಲ್​ರೌಂಡರ್​ ಸ್ಟೋಕ್ಸ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸ್ಟೋಕ್ಸ್​ ವಿಶ್ವಕಪ್​ ಹಾಗೂ ಇತ್ತೀಚೆಗೆ ಮುಗಿದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರಂತಹ ಆಟಗಾರರನ್ನು ಪ್ರತಿ ತಂಡದ ನಾಯಕರು ತಮ್ಮ ತಂಡದಲ್ಲಿ ಆಡಿಸಲು ಬಯಸುತ್ತಾರೆ ಎಂದಿದ್ದಾರೆ.

ABOUT THE AUTHOR

...view details