ಲಂಡನ್:ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೂಪರ್ ಓವರ್ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬೆನ್ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಗನ ಪ್ರದರ್ಶನ ತೃಪ್ತಿ ನೀಡಿದೆ, ಕಿವೀಸ್ ಪ್ರಶಸ್ತಿ ಗೆಲ್ಲದಿರುವುದಕ್ಕೆ ನೋವಿದೆ: ಸ್ಟೋಕ್ಸ್ ತಂದೆ - ನ್ಯೂಜಿಲ್ಯಾಂಡ್
ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ ಟ್ರೋಫಿ ಗೆಲ್ಲದಿರುವುದಕ್ಕೆ ನನಗೆ ನೋವಿದೆ ಎಂದು ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂದೆ ಹೇಳಿಕೆ ನೀಡಿದ್ದಾರೆ.
ಇದೇ ವಿಷಯದ ಬಗ್ಗೆ ಬೆನ್ ಸ್ಟೋಕ್ಸ್ ತಂದೆ ಗೆರಾರ್ಡ್ ಮಾತನಾಡಿದ್ದಾರೆ. ವಿಶ್ವಕಪ್ನಲ್ಲಿ ಮಗ ನೀಡಿರುವ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ. ಜತೆಗೆ ಅದು ತೃಪ್ತಿ ನೀಡಿದೆ. ಆದರೆ ನ್ಯೂಜಿಲ್ಯಾಂಡ್ ಪ್ರಶಸ್ತಿ ಗೆಲ್ಲದಿರುವುದು ನಿಶಾಸೆಗೆ ಕಾರಣವಾಗಿದ್ದು, ಪಂದ್ಯ ಟೈ ಆದ ಕಾರಣ ಪ್ರಶಸ್ತಿಯನ್ನ ಉಭಯ ತಂಡಗಳು ಶೇರ್ ಮಾಡಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಮೂಲತ ನ್ಯೂಜಿಲ್ಯಾಂಡ್ನವರಾಗಿದ್ದು, ಈಗಲೂ ಅವರ ತಂದೆ-ತಾಯಿ ಕಿವೀಸ್ನಲ್ಲೇ ವಾಸವಾಗಿದ್ದಾರೆ. ಬಾಲ್ಯದಲ್ಲಿ ನ್ಯೂಜಿಲ್ಯಾಂಡ್ನಲ್ಲಿ ವಾಸವಾಗಿದ್ದ ಸ್ಟೋಕ್ಸ್, ತದನಂತರ ಇಂಗ್ಲೆಂಡ್ಗೆ ತೆರಳಿ ಅಲ್ಲೇ ಉಳಿದುಕೊಳ್ಳುತ್ತಾರೆ. ರಗ್ಬಿ ಆಟಗಾರನಾಗಿದ್ದ ಸ್ಟೋಕ್ಸ್ ತಂದೆ ಇದೀಗ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.