ಕರ್ನಾಟಕ

karnataka

ETV Bharat / sports

ಬಿಸಿಸಿಐ ನೂತನ ಉಪಾಧ್ಯಕ್ಷ ರಾಜೀವ್​ ಶುಕ್ಲಾ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪ - BCCI VC Rajeev Shukla

ಬಿಸಿಸಿಐ ಮತ್ತು ಶುಕ್ಲಾ ಗುರುವಾರದಿಂದ ಮುಂದಿನ 2 ವಾರಗಳ ಅವಧಿಯಲ್ಲಿ ಈ ದೂರಿಗೆ ಲಿಖಿತ ಪ್ರತಿಕ್ರಿಯೆಯನ್ನು ನೈತಿಕ ಅಧಿಕಾರಿಗಳ ಮುಂದೆ ಸಲ್ಲಿಸುವಂತೆ ಕೋರಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದೇಶಗಳನ್ನು ನಂತರ ರವಾನಿಸಲಾಗುವುದು ಎಂದು ನೈತಿಕ ಅಧಿಕಾರಿಗಳ ಕಚೇರಿ ತಿಳಿಸಿದೆ.

ಬಿಸಿಸಿಐ ನೂತನ ಉಪಾಧ್ಯಕ್ಷ ರಾಜೀವ್​ ಶುಕ್ಲಾ
ಬಿಸಿಸಿಐ ನೂತನ ಉಪಾಧ್ಯಕ್ಷ ರಾಜೀವ್​ ಶುಕ್ಲಾ

By

Published : Jan 14, 2021, 9:52 PM IST

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿರುದ್ಧ ಮಧ್ಯಪ್ರದೇಶದ ಕ್ರಿಕೆಟ್​ ಅಸೋಸಿಯೇಷನ್​ ಸದಸ್ಯ ಸಂಜೀವ್​ ಗುಪ್ತಾ ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದಾರೆ.

ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿದ್ದರೆ ಹಿತಾಸಕ್ತಿ ಸಂಘರ್ಷ ಉಂಟಾಗುತ್ತದೆ. ಇದೀಗ ಅದೇ ವಿಚಾರವಾಗಿ ಶುಕ್ಲಾ ವಿರುದ್ಧ ಗುಪ್ತಾ ಬಿಸಿಸಿಐ ಎಥಿಕ್ಸ್​ ಅಧಿಕಾರಿ ಜಸ್ಟೀಸ್ ಡಿ.ಕೆ.ಜೈನ್ ಅವರಿಗೆ ದೂರು ನೀಡಿದ್ದಾರೆ.

ಬಿಸಿಸಿಐನ ನಿಯಮ 39(2)(ಬಿ)ರ ಅನ್ವಯ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿರುದ್ಧ ಸಂಜೀವ್​ ಗುಪ್ತಾ ನೀಡಿರುವ ಹಿತಾಶಕ್ತಿ ಆರೋಪದ ದೂರನ್ನು ಬಿಸಿಸಿಐ ನೈತಿಕ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಕಚೇರಿ ಮಾಹಿತಿ ನೀಡಿದೆ.

ಅದರಂತೆ ಬಿಸಿಸಿಐ ಮತ್ತು ಶುಕ್ಲಾ ಗುರುವಾರದಿಂದ ಮುಂದಿನ 2 ವಾರಗಳ ಅವಧಿಯಲ್ಲಿ ಈ ದೂರಿಗೆ ಲಿಖಿತ ಪ್ರತಿಕ್ರಿಯೆಯನ್ನು ನೈತಿಕ ಅಧಿಕಾರಿಗಳ ಮುಂದೆ ಸಲ್ಲಿಸುವಂತೆ ಕೋರಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದೇಶಗಳನ್ನು ನಂತರ ರವಾನಿಸಲಾಗುವುದು ಎಂದು ನೈತಿಕ ಅಧಿಕಾರಿಗಳ ಕಚೇರಿ ತಿಳಿಸಿದೆ.

ಈ ಹಿಂದೆ ಸಂಜೀವ್ ಗುಪ್ತಾ ಭಾರತ ತಂಡದ ಮಾಜಿ ಆಟಗಾರರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್​, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಹಲವಾರು ಕ್ರಿಕೆಟಿಗರ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು.

ಇದನ್ನೂ ಓದಿ: 37 ಎಸೆತಕ್ಕೆ ಶತಕ... ಅಜರುದ್ದೀನ್ ಆಟಕ್ಕೆ ಸೆಹ್ವಾಗ್ ಫಿದಾ, ಪ್ರಶಂಸೆಯ ಸುರಿಮಳೆ

ABOUT THE AUTHOR

...view details