ಬೆಂಗಳೂರು: ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಸಚಿನ್ ನಂತರದ ಸ್ಥಾನದಲ್ಲಿರುವ ದ್ರಾವಿಡ್ ಹಾಗೂ ರವಿಶಾಸ್ತ್ರಿ ಇಬ್ಬರು ಜೊತೆಯಾಗಿರುವ ಫೋಟೋವನ್ನು ಬಿಸಿಸಿಐ ಶೇರ್ ಮಾಡಿಕೊಂಡು 'ಭಾರತ ಕ್ರಿಕೆಟ್ನ ಇಬ್ಬರು ಅದ್ಭುತ ವ್ಯಕ್ತಿಗಳು ಭೇಟಿಯಾದಾಗ' ಎಂದು ಕಾಮೆಂಟ್ ಮಾಡಿರುವುದು ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದೆ.
ದ್ರಾವಿಡ್ ಜೊತೆ ಶಾಸ್ತ್ರಿಯ ಹೋಲಿಕೆ ಮಾಡಿ ಟ್ವಿಟ್ಟಿಗರಿಂದ ಟ್ರೋಲ್ಗೆ ತುತ್ತಾದ ಬಿಸಿಸಿಐ - ದ್ರಾವಿಡ್ ಎನ್ಸಿಎ
ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ರ ಫೋಟೋ ಶೇರ್ ಮಾಡಿ ಇವರಿಬ್ಬರು ಭಾರತ ಕ್ರಿಕೆಟ್ನ ಅದ್ಭುತಗಳು ಎಂದು ಬರೆದುಕೊಂಡಿರುವುದನ್ನು ದ್ರಾವಿಡ್ ಅಭಿಮಾನಿಗಳು ಖಂಡಿಸಿ ಬಿಸಿಸಿಐ ಅನ್ನು ಟ್ವೀಟ್ ಮೂಲಕ್ ಕಾಲೆಳೆದಿದ್ದಾರೆ.
![ದ್ರಾವಿಡ್ ಜೊತೆ ಶಾಸ್ತ್ರಿಯ ಹೋಲಿಕೆ ಮಾಡಿ ಟ್ವಿಟ್ಟಿಗರಿಂದ ಟ್ರೋಲ್ಗೆ ತುತ್ತಾದ ಬಿಸಿಸಿಐ](https://etvbharatimages.akamaized.net/etvbharat/prod-images/768-512-4506559-787-4506559-1569039312783.jpg)
ಭಾರತ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ಮುಖಾಮುಖಿಯಾಗಿದ್ದರು. ಈ ಫೋಟೋವನ್ನು ತನ್ನ ಅಫಿಶಿಯಲ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿತ್ತು. ಇಷ್ಟು ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಬದಲಾಗಿ ಇಬ್ಬರೂ ಭಾರತ ಕ್ರಿಕೆಟ್ನ ಅದ್ಭುತ ಎಂದು ಟೈಟಲ್ ನೀಡಿರುವುದಕ್ಕೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ದ್ರಾವಿಡ್ ಅವರನ್ನು ಇತ್ತೀಚೆಗಷ್ಟೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಇದರಿಂದ ದ್ರಾವಿಡ್ ಅಂಡರ್ 19 ಹಾಗೂ ಭಾರತ ಎ ಕ್ರಿಕೆಟ್ ತಂಡಗಳ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು.