ಕರ್ನಾಟಕ

karnataka

ETV Bharat / sports

ಯುವರಾಜ್​ ಸಿಂಗ್ ಕಮ್​ಬ್ಯಾಕ್​ ಆಸೆಗೆ ತಣ್ಣೀರೆರಚಿದ ಬಿಸಿಸಿಐ - ಪಂಜಾಬ್ ಪರ ಆಡುವ ಆಸೆ ಹೊಂದಿದ್ದ ಯುವಿಗೆ ನಿರಾಶೆ

ಯುವರಾಜ್ ಸಿಂಗ್ ಕೆನಡಾ ಗ್ಲೋಬಲ್​ ಟಿ20​ ಲೀಗ್​, ಅಬುದಾಬಿ ಟಿ10 ಲೀಗ್​ ಸೇರಿದಂತೆ ಕೆಲವು ಟಿ20 ಲೀಗ್​ಗಳಲ್ಲೂ ಆಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಪಂಜಾಬ್ ಕ್ರಿಕೆಟ್​ ಬೋರ್ಡ್​ ಮನವಿಯ ಮೇರೆಗೆ ನಿವೃತ್ತಿ ನಿರ್ಧಾರದಿಂದ ಹೊರಬಂದು ಮತ್ತೆ ಪಂಜಾಬ್​ ಪರ ದೇಶಿ ಕ್ರಿಕೆಟ್​ ಆಡಲು ಬಯಸಿ, ಅನುಮತಿಗಾಗಿ ಬಿಸಿಸಿಐಗೆ ಮನವಿ ಪತ್ರ ಸಲ್ಲಿಸಿದ್ದರು.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​

By

Published : Dec 28, 2020, 11:32 PM IST

ಮುಂಬೈ:2019ರಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್​ ಸಿಂಗ್ ವಿದೇಶಿ ಕ್ರಿಕೆಟ್​ ಆಡಲು ಬಿಸಿಸಿಐ ಆಯೋಜಿಸುವ ಎಲ್ಲಾ ಮಾದರಿಯ ಕ್ರಿಕೆಟ್​ನಿ ನಿವೃತ್ತಿ ಘೋಷಿಸಿ, ಎನ್​ಒಸಿ ಪಡೆದಿದ್ದರು.

ನಂತರ ಕೆನಡಾ ಗ್ಲೋಬಲ್​ ಟಿ20​ ಲೀಗ್​, ಅಬುದಾಬಿ ಟಿ10 ಲೀಗ್​ ಸೇರಿದಂತೆ ಕೆಲವು ಟಿ20 ಲೀಗ್​ಗಳಲ್ಲೂ ಆಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಪಂಜಾಬ್ ಕ್ರಿಕೆಟ್​ ಬೋರ್ಡ್​ ಮನವಿಯ ಮೇರೆಗೆ ನಿವೃತ್ತಿ ನಿರ್ಧಾರದಿಂದ ಹೊರಬಂದು ಮತ್ತೆ ಪಂಜಾಬ್​ ಪರ ದೇಶಿ ಕ್ರಿಕೆಟ್​ ಆಡಲು ಬಯಸಿ, ಅನುಮತಿಗಾಗಿ ಬಿಸಿಸಿಐಗೆ ಮನವಿ ಪತ್ರ ಸಲ್ಲಿಸಿದ್ದರು.

ಅಲ್ಲದೆ ಸಯ್ಯದ್​ ಮುಷ್ತಾಕ್ ಅಲಿ ಟಿ20 ಟೂರ್ನಿಗಾಗಿ ಪಂಜಾಬ್​ ಕ್ರಿಕೆಟ್ ಅಸೋಸಿಯೇಸನ್ ಘೋಷಿಸಿದ 30 ಸಂಭವನೀಯರ ಪಟ್ಟಿಯಲ್ಲಿ ಅವಕಾಶವನ್ನು ಗಿಟ್ಟಿಸಿದ್ದರು. ಆದರೆ ಬಿಸಿಸಿಐ ಎಡಗೈ ಆಟಗಾರನ ಆಸೆ ತಣ್ಣೀರೆರಚಿದ್ದು ಅವರಿಗೆ ದೇಶಿ ಕ್ರಿಕೆಟ್​ ಮರಳುವ ಮನವಿಯನ್ನು ತಿರಸ್ಕರಿಸಿದೆ. ಆದರೆ ಯಾವ ಕಾರಣಕ್ಕೆ ಯುವಿ ಮನವಿಯನ್ನು ತಿರಸ್ಕರಿಸಲಾಗಿದೆ ಎನ್ನುವುದು ತಿಳಿದುಬಂದಿಲ್ಲ. ಈ ಕಾರಣ ಅವರು ದೇಸಿ ಕ್ರಿಕೆಟ್​ನಲ್ಲಿ ಕಮ್​ಬ್ಯಾಕ್ ಮಾಡುವ ಸಾಧ್ಯತೆ ಇಲ್ಲದಂತಾಗಿದೆ.

ಮಂದೀಪ್ ಸಿಂಗ್​ಗೆ ಪಂಜಾಬ್ ನಾಯಕತ್ವ

ಯುವಿ ಅಲಭ್ಯತೆ ನಂತರ ಪಂಜಾಬ್ ತಂಡ ಮಂದೀಪ್​ ಸಿಂಗ್​ಗೆ ನಾಯಕತ್ವ ನೀಡಿದೆ. ಅವರ ಐಪಿಎಲ್​ ಪ್ರದರ್ಶನ ನೋಡಿ ಪಂಜಾಬ್ ತಂಡದ ಜವಾಬ್ದಾರಿ ವಹಿಸಲಾಗಿದೆ. ಇನ್ನು ಚಂಡೀಗಢ​ ತಂಡದಿಂದ ಬಂದಿರುವ ಬರೀಂದರ್​ ಸ್ರಾನ ತಂಡಕ್ಕೆ ಸೇರಿಕೊಂಡಿದ್ದಾರೆ. ಪಂಜಾಬ್ ತಂಡ ಉತ್ತರ ಪ್ರದೇಶದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ABOUT THE AUTHOR

...view details