ಕರ್ನಾಟಕ

karnataka

ETV Bharat / sports

ಭಾರತ ತಂಡದಲ್ಲಿ ಬಿರುಕು... ಕೊಹ್ಲಿಯಿಂದ ರೋಹಿತ್​ ಹೆಸರಿಗೆ ಶಿಫ್ಟ್​ ಆಗಲಿದೆಯಾ ನಾಯಕತ್ವ! - ಹೆಸರಿಗೆ ಸಿಫ್ಟ್

ಸದ್ಯ ವಿಂಡೀಸ್​ ವಿರುದ್ಧದ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್​ಗೆ ನಾಯಕತ್ವವಹಿಸಿರುವ ಬಿಸಿಸಿಐ ಮುಂದಿನ ದಿನಗಳಲ್ಲಿ ಕೊಹ್ಲಿಯನ್ನು ಟೆಸ್ಟ್​ ಫಾರ್ಮೇಟ್​ಗೆ ಮಾತ್ರ ನಾಯಕನನ್ನಾಗಿ ಮುಂದುವರಿಸುವ ಆಲೋಚನೆಯಲ್ಲಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

BCCI

By

Published : Jul 15, 2019, 3:27 PM IST

ಲಂಡನ್​: ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲನುಭಸಿದ ಬೆನ್ನಲ್ಲೇ ತಂಡದಲ್ಲಿ ಬಣ ರಾಜಕೀಯ ಶುರುವಾಗಿದೆ ಎಂಬ ಅನುಮಾನ ಮೂಡಿದೆ.

ವಿಂಡೀಸ್​ ವಿರುದ್ಧದ ಸರಣಿಗಾಗಿ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್​ಗೆ ನಾಯಕತ್ವವಹಿಸಿರುವ ಬಿಸಿಸಿಐ ಮುಂದಿನ ದಿನಗಳಲ್ಲಿ ಕೊಹ್ಲಿಯನ್ನು ಟೆಸ್ಟ್​ ಫಾರ್ಮೆಟ್​​ಗೆ ಮಾತ್ರ ನಾಯಕನಾಗಿ ಮುಂದುವರಿಸುವ ಆಲೋಚನೆಯಲ್ಲಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ವಿಶ್ವಕಪ್​ ವೇಳೆ ತಂಡದಲ್ಲಿ ಎರಡು ಬಣವಾಗಿ ವಿಂಗಡಣೆಯಾಗಿದ್ದು, ಕೊಹ್ಲಿ ಹಾಗೂ ಶಾಸ್ತ್ರಿ ಕೆಲವೊಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಇತರ ಆಟಗಾರರ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ. ಜೊತೆಗೆ ತಮ್ಮ ನಾಯಕತ್ವದಲ್ಲಿ ಆರ್​ಸಿಬಿ ತಂಡದಲ್ಲಿರುವ ಚಹಲ್ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ವಿಜಯ್​ ಶಂಕರ್ ಅವರನ್ನು ಆಯ್ಕೆ ಮಾಡುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ರೋಹಿತ್​ - ಕೊಹ್ಲಿ ನಡುವೆ ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿ ಕೇಳಿ ಬರುತ್ತಿದೆ.

ಈಗಾಗಲೇ ಐಪಿಎಲ್​ನಲ್ಲಿ ಉತ್ತಮ ನಾಯಕತ್ವ ಪ್ರದರ್ಶನ ತೋರಿರುವ ರೋಹಿತ್​ ಶರ್ಮಾ ಧೋನಿ ನಂತರದ ಬೆಸ್ಟ್​ ಕ್ಯಾಪ್ಟನ್​ ಎಂದೆನಿಸಿಕೊಂಡಿದ್ದಾರೆ. ಕೊಹ್ಲಿ ಕೂಡ ಉತ್ತಮ ನಾಯಕ ಎಂದೆನಿಸಿಕೊಂಡಿದ್ದರೂ ಅವರ ಹಿಂದೆ ಧೋನಿ ಇದ್ದರೆಂಬುದು ಗೊತ್ತಿದೆ. ಧೋನಿ ನಿವೃತ್ತಿಯಂಚಿನಲ್ಲಿರುವುದರಿಂದ ಕೊಹ್ಲಿ ಸಿಟ್ಟಿನ ವರ್ತನೆ ಮುಂದುವರಿದರೆ ತಂಡದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ 2023ರ ವಿಶ್ವಕಪ್​ಗೆ ರೋಹಿತ್​ ನೇತೃತ್ವದಲ್ಲಿ ತಂಡವನ್ನು ಸಿದ್ದಗೊಳಿಸಬೇಕೆಂಬುದು ಬಿಸಿಸಿಐನ ಲೆಕ್ಕಾಚಾರ ಇರಬಹುದು ಎನ್ನಲಾಗಿದೆ.

ಒಟ್ಟಾರೆ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ರೋಹಿತ್​ ಶರ್ಮಾ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದರ ಮೇಲೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳಲಿದೆ.

ABOUT THE AUTHOR

...view details