ಮುಂಬೈ: ಕಳೆದ ವಾರವಷ್ಟೇ ಭಾರತ ತಂಡಕ್ಕೆ ರವಿಶಾಸ್ತ್ರಿ ಮುಖ್ಯಕೋಚ್ ಆಗಿ ನೇಮಕವಾಗಿದ್ದರು. ಇದೀಗ ಉಳಿದಿರುವ ಇತರೆ ಕೋಚ್ ಸಿಬ್ಬಂದಿ ಆಯ್ಕೆಗೆ ತಲಾ ಮೂವರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಿ ರಿಲೀಸ್ ಮಾಡಲಾಗಿದೆ.
ಇಂದು ಎಂಎಸ್ಕೆ ಪ್ರಸಾದ್, ಸರಣ್ದೀಪ್ ಸಿಂಗ್, ಗಗನ್ ಖೋಡಾಜತಿನ್ ಪರಂಜಪೆ ಹಾಗೂ ದೇವಾಂಗ್ ನೇತೃತ್ವದ ಐದು ಸದಸ್ಯರ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ಗಳಿಗೆ ಮೂವರ ಹೆಸರನ್ನು ಅಂತಿಮಗೊಳಿಸಿದೆ.
ಬ್ಯಾಟಿಂಗ್ ಕೋಚ್ಗೆ 14 ಅಭ್ಯರ್ಥಿಗಳು, ಬೌಲಿಂಗ್ ಕೋಚ್ಗೆ 12 ಅಭ್ಯರ್ಥಿಗಳ ಹಾಗೂ 9 ಅಭ್ಯರ್ಥಿಗಳು ಫೀಲ್ಡಿಂಗ್ ಕೋಚ್ ವಿಭಾಗಕ್ಕೆ ನಡೆದ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇಷ್ಟು ಅಭ್ಯರ್ಥಿಗಳನ್ನು ಸಂದರ್ಶಿಸಿದ ಆಯ್ಕೆ ಸಮಿತಿ ಎಲ್ಲಾ ವಿಭಾಗದಲ್ಲೂ ಮೂವರ ಹೆಸರನ್ನು ಅಂತಿಮಗೊಳಿಸಿದೆ.