ಮುಂಬೈ:ಮಾರ್ಚ್ 18 ಮತ್ತು 21ರಂದು ಢಾಕಾದ ಶೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ತಂಡಗಳ ನಡುವೆ ಟಿ-20 ಪಂದ್ಯಗಳ ನಡೆಯಲಿದ್ದು, ಅದಕ್ಕಾಗಿ ಭಾರತದಿಂದ ನಾಲ್ವರು ಸ್ಟಾರ್ ಪ್ಲೇಯರ್ಸ್ ಕಣಕ್ಕಿಳಿಯಲಿದ್ದಾರೆ.
ಏಷ್ಯಾ ಇಲೆವೆನ್ - ವಿಶ್ವ ಇಲೆವೆನ್ ನಡುವೆ ಟಿ-20 ಫೈಟ್... ಭಾರತದಿಂದ ನಾಲ್ವರು ಪ್ಲೇಯರ್ಸ್ ಕಣಕ್ಕೆ! - ಏಷ್ಯಾ ಇಲೆವೆನ್ ತಂಡ
ಏಷ್ಯಾ ಇಲೆವೆನ್ ತಂಡದಲ್ಲಿ ಭಾಗಿಯಾಗಲು ಭಾರತದ ಕ್ರಿಕೆಟ್ ಮಂಡಳಿಯಿಂದ ನಾಲ್ವರು ಪ್ಲೇಯರ್ಸ್ ಹೆಸರು ಫೈನಲ್ ಮಾಡಲಾಗಿದ್ದು, ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಇವರ ಹೆಸರು ರವಾನೆ ಮಾಡಲಾಗಿದೆ.
ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ನಾಲ್ವರು ಆಟಗಾರರ ಹೆಸರು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ರವಾನೆ ಮಾಡಿದ್ದು, ಅದರ ಪ್ರಕಾರ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್, ವೇಗಿ ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಈ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. ಏಷ್ಯಾ ಇಲೆವೆನ್ ತಂಡದಲ್ಲಿ ಭಾರತ, ಬಾಂಗ್ಲಾ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡದ ಆಟಗಾರರು ಭಾಗಿಯಾಗಲಿದ್ದು, ವಿಶ್ವ ಇಲೆವೆನ್ನಲ್ಲಿ ಬೇರೆ ತಂಡದ ಪ್ಲೇಯರ್ಸ್ ಭಾಗಿಯಾಗಲಿದ್ದಾರೆ.
ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಬಾಂಗ್ಲಾ ಕ್ರಿಕೆಟ್ ಮಂಡಳಿ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವೆ ಟಿ-20 ಸರಣಿಯನ್ನು ಆಯೋಜಿಸುತ್ತಿದೆ. ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಕಾರಣ ಈ ಟೂರ್ನಿಯಲ್ಲಿ ಏಷ್ಯಾ ಪರ ಭಾಗಿಯಾಗಲು ಪಾಕ್ ಪ್ಲೇಯರ್ಸ್ಗಳಿಗೆ ಆಹ್ವಾನ ನೀಡಿಲ್ಲ.