ಕರ್ನಾಟಕ

karnataka

ETV Bharat / sports

ರಣಜಿ ಫೈನಲ್​ ಆಡಲು ಜಡೇಜಾಗೆ ಅವಕಾಶ ನೀಡಿಲ್ಲ ಎಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ!

ರಣಜಿ ಫೈನಲ್​​ನಲ್ಲಿ ಸೌರಾಷ್ಟ್ರ ತಂಡದ ಪರ ಕ್ರಿಕೆಟ್​ ಆಡಲು ರವೀಂದ್ರ ಜಡೇಜಾಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದ ಸೌರಾಷ್ಟ್ರ ಕ್ರಿಕೆಟ್​ ಮಂಡಳಿಗೆ ಸೌರವ್​ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

BCCI president Sourav Ganguly
ಬಿಸಿಸಿಐ ಅಧ್ಯಕ್ಷ ಗಂಗೂಲಿ

By

Published : Mar 6, 2020, 12:07 PM IST

ಮುಂಬೈ: ಭಾರತೀಯ ಕ್ರಿಕೆಟ್​ನ ಆಲ್​ರೌಂಡರ್​ ರವೀಂದ್ರ ಜಡೇಜಾಗೆ ಸೌರಾಷ್ಟ್ರ ತಂಡದ ಪರ ಫೈನಲ್​​ ಆಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ತಿಳಿಸಿದ್ದಾರೆ.

ವೃದ್ಧಿಮಾನ್​ ಸಾಹಾ

ಗುಜರಾತ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಸೌರಾಷ್ಟ್ರ ಇದೀಗ ಫೈನಲ್​ ಪಂದ್ಯದಲ್ಲಿ ಬಂಗಾಳ ಸವಾಲು ಎದುರಿಸಲಿದೆ. ತಂಡದಲ್ಲಿ ಕ್ರಿಕೆಟ್​ ಆಡಲು ರವೀಂದ್ರ ಜಡೇಜಾಗೆ ಅವಕಾಶ ನೀಡಬೇಕು ಎಂದು ಸೌರಾಷ್ಟ್ರ ಕ್ರಿಕೆಟ್​ ಮಂಡಳಿ ಬಿಸಿಸಿಐ ಅಧ್ಯಕ್ಷರ ಬಳಿ ಮನವಿ ಮಾಡಿಕೊಡಿತ್ತು. ಆದರೆ, ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗುವ ಸುಳಿವು ನೀಡಿದ್ದಾರೆ.

ಚೇತೇಶ್ವರ್​ ಪೂಜಾರಾ

ಮಾರ್ಚ್​ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಅದರಲ್ಲಿ ಜಡೇಜಾ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ರಣಜಿಯಲ್ಲಿ ಆಡಲು ಅವರಿಗೆ ಅವಕಾಶ ನೀಡಲ್ಲ ಎಂಬ ಮಾತು ಕೇಳಿ ಬರುತ್ತಿವೆ.

ರಣಜಿ ಆಡಲು ಜಡೇಜಾಗಿಲ್ಲ ಅವಕಾಶ!

ಇದರ ಮಧ್ಯೆ ಚೇತೇಶ್ವರ್​ ಪೂಜಾರಾ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿಯಲಿದ್ದು, ವೃದ್ಧಿಮಾನ್​ ಸಾಹಾ ಬಂಗಾಳ್​ ತಂಡದಲ್ಲಿ ಆಡಲಿದ್ದಾರೆ. ಆದರೆ, ಜಡೇಜಾಗೆ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ.

ABOUT THE AUTHOR

...view details