ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ಆಟಗಾರ ವಿವಿಎಸ್ ಲಕ್ಷ್ಮಣ್ಗೆ ಬಿಸಿಸಿಐ ನೀತಿ ನಿಯಮ ಮಂಡಳಿ ತನಿಖಾಧಿಕಾರಿ ಡಿ.ಕೆ.ಜೈನ್ ನೋಟಿಸ್ ನೀಡಿದ್ದಾರೆ.
ಒಂದೇ ಸಮಯದಲ್ಲಿ ಎರಡು ಹುದ್ದೆ ನಿರ್ವಹಣೆ: ಸಚಿನ್, ಲಕ್ಷ್ಮಣ್ಗೆ ನೋಟಿಸ್ - undefined
ಏಕ ಕಾಲದಲ್ಲೇ ಎರಡು ಹುದ್ದೆ ನಿರ್ವಹಿಸುತ್ತಿರುವ ಭಾರತ ತಂಡದ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ನೋಟಿಸ್ ನೀಡಲಾಗಿದೆ.

ಸಚಿನ್ ತೆಂಡೂಲ್ಕರ್ ಮುಂಬೈ ಮತ್ತು ವಿವಿಎಸ್ ಲಕ್ಷ್ಮಣ್ ಸನ್ರೈಸರ್ಸ್ ತಂಡದ ಮೆಂಟರ್ಗಳಾಗಿ ಕಾರ್ಯನಿರ್ವಹಿಸುತಿದ್ದಾರೆ. ಅಲ್ಲದೇ ಇದೇ ವೇಳೆ, ಕ್ರಿಕೆಟ್ ಅಡ್ವೈಸರಿ ಕಮಿಟಿ ಸದಸ್ಯರಾಗಿದ್ದಾರೆ. ಒಂದೇ ಬಾರಿಯಲ್ಲಿ 2 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಹೀಗಾಗಿ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತದೆ ಎಂದು ತಿಳಿಸಿರುವ ಬಿಸಿಸಿಐ ಒಂಬುಡ್ಸ್ಮನ್, ಈ ಸಂಬಂಧ ಲಿಖಿತ ಉತ್ತರ ನೀಡುವಂತೆ ನೋಟಿಸ್ನಲ್ಲಿ ತಿಳಿಸಿದೆ.
ಮಧ್ಯಪ್ರದೇಶ ಕ್ರಿಕೆಟ್ ಅಸೊಸಿಯೇಷನ್ ಸದಸ್ಯ ಸಂಜೀವ್ ಗುಪ್ತ ನೀಡಿರುವ ದೂರಿನ ಅನ್ವಯ ನೋಟಿಸ್ ನೀಡಲಾಗಿದೆ. ಈ ಹಿಂದೆ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಗೂ ಕೂಡ ನೈತಿಕ ಸಮಿತಿ ನೋಟಿಸ್ ಜಾರಿ ಮಾಡಿತ್ತು.