ಕರ್ನಾಟಕ

karnataka

ETV Bharat / sports

ಮುಂಬೈನಲ್ಲಿ ಶಾರ್ದೂಲ್ ಅಭ್ಯಾಸ.. ಟೀಂ ಇಂಡಿಯಾ ವೇಗಿ ನಡೆಗೆ ಬಿಸಿಸಿಐ ಅಸಮಾಧಾನ - ಶಾರ್ದೂಲ್ ಠಾಕೂರ್ ಲೇಟೆಸ್ಟ್ ನ್ಯೂಸ್

ಬಿಸಿಸಿಐ ಗುತ್ತಿಗೆ ಪಡೆದ ಆಟಗಾರನಾಗಿರುವ ಶಾರ್ದೂಲ್ ಠಾಕೂರ್, ಕ್ರಿಕೆಟ್ ಮಂಡಳಿಯ ಅನುಮತಿ ಪಡೆಯದೆ ಅಭ್ಯಾಸ ನಡೆಸಿದ್ದು ಉತ್ತಮ ನಡೆಯಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

BCCI not impressed as Shardul Thakur
ಟೀಂ ಇಂಡಿಯಾ ವೇಗಿ ನಡೆಗೆ ಬಿಸಿಸಿಐ ಅಸಮಾಧಾನ

By

Published : May 24, 2020, 10:51 AM IST

ಮುಂಬೈ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎರಡು ತಿಂಗಳ ಲಾಕ್​ಡೌನ್​ ನಂತರ ಹೊರಾಂಗಣ ತರಬೇತಿಯನ್ನು ಪುನಾರಂಭಿಸಿದ ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಡೆಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಶಾರ್ದೂಲ್ ಮಂಡಳಿಯ ಅನುಮತಿ ಪಡೆಯದೆ ಅಭ್ಯಾಸ ನಡೆಸಲು ನಿರ್ಧರಿಸಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ. ಅವರು ಬಿಸಿಸಿಐ ಗುತ್ತಿಗೆ ಪಡೆದ ಆಟಗಾರನಾಗಿದ್ದಾರೆ. ಹೀಗಾಗಿ ಮಂಡಳಿಯ ಅನುಮತಿ ಪಡೆಯಬೇಕು. ಆದರೆ ಅವರು ತಮ್ಮದೇ ನಿರ್ಧಾರದ ಮೇಲೆ ಅಭ್ಯಾಸಕ್ಕೆ ಇಳಿದಿದ್ದಾರೆ ಇದು ಉತ್ತಮ ನಡೆಯಲ್ಲ ಎಂದಿದ್ದಾರೆ.

ವೈಯಕ್ತಿಕ ತರಬೇತಿಗೆ ಅನುಮತಿ.. 2 ತಿಂಗಳ ನಂತರ ಮೈದಾನಕ್ಕಿಳಿದ ಟೀಂ ಇಂಡಿಯಾದ ಮೊದಲ ವೇಗಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಟಿ-20 ತಂಡದ ಉಪನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಮುಂಬೈನಲ್ಲೆ ಇದ್ದಾರೆ. ಆದರೆ, ಈ ಎಲ್ಲಾ ಆಟಗಾರರು ತಾವು ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ. ಸರ್ಕಾರ ನಿರ್ಬಂಧ ಸಡಿಲಿಸಿದ ನಂತರವೂ ಮೈದಾನ್ಕಕೆ ಇಳಿದಿಲ್ಲ.

ಶಾರ್ದುಲ್ ಬಿಸಿಸಿಐನ ಗುತ್ತಿಗೆ ಪಡೆದ ಕ್ರಿಕೆಟಿಗ ಮತ್ತು ಪ್ರಸ್ತುತ ಒಪ್ಪಂದದ ಪ್ರಕಾರ ಗ್ರೇಡ್ 'ಸಿ' ಭಾಗವಾಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ಅವರು ದೇಶದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ರಾಜ್ಯದಲ್ಲಿದ್ದಾರೆ. ಆಟಗಾರರ ಸುರಕ್ಷತೆ ಬಗ್ಗೆ ಬಿಸಿಸಿಐ ಎಚ್ಚರಿಕೆಯಿಂದಿರುವ ಸಮಯದಲ್ಲಿ ರೆಡ್​ ಝೋನ್ ಅಲ್ಲದ ಪಾಲ್ಘರ್​ ಜಿಲ್ಲೆಯಲ್ಲಿ ಕ್ರಿಕೆಟ್ ಮಂಡಳಿಯಿಂದ ಅನುಮೋದನೆ ಪಡೆಯದೆ ಅಭ್ಯಾಸ ನಡೆಸಿರುವುದು ಉತ್ತಮ ನಡೆಯಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ABOUT THE AUTHOR

...view details