ಮುಂಬೈ: ಕರ್ನಾಟಕದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಭಾರತದ ಮಾಜಿ ಆಟಗಾರರಾದ ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಮಾಜಿ ಆಟಗಾರ್ತಿ ಸುಲಕ್ಷಣ ನಾಯ್ಕ್ ಅವರ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಬುಧವಾರ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರವಲಯದ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಕನ್ನಡಿಗ ಸುನೀಲ್ ಜೋಶಿ ಅವರು ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ, ಮಾಜಿ ವೇಗದ ಬೌಲರ್ ಹರ್ವಿಂದರ್ ಸಿಂಗ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಆದರೆ ಮತ್ತೋರ್ವ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ಮೂರನೇ ಹಂತದ ಸಂದರ್ಶನದಲ್ಲಿ ತಿರಸ್ಕೃತರಾಗಿದ್ದಾರೆ.
ಅಂತಿಮ ಸುತ್ತಿನಲ್ಲಿ ಕನ್ನಡಿಗರಾದ ಸುನೀಲ್ ಜೋಶಿ, ವೆಂಕಟೇಶ್ ಪ್ರಸಾದ್ ಸೇರಿದಂತೆ ಐವರು ಮಾಜಿ ಆಟಗಾರರಿದ್ದರು.