ಮುಂಬೈ: ಭಾರತದಲ್ಲಿ ಕೋವಿಡ್ 19 ಪ್ರಮಾಣ ಕಡಿಮೆಯಾಗುತ್ತಿದ್ದು, ದಿನಕ್ಕೆ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದರಿಂದ ನಾವು 2021ರ ಐಪಿಎಲ್ಗಾಗಿ ಬ್ಯಾಕ್ಅಪ್ ಸ್ಥಳದ ಅವಕಾಶದ ಅವಶ್ಯಕತೆಯಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ ಧುಮಾಲ್ ಶನಿವಾರ ತಿಳಿಸಿದ್ದಾರೆ.
ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿರುವ ಧುಮಾಲ್ ಕಳೆದ ಬಾರಿ ಸಾಂಕ್ರಾಮಿಕದಿಂದಾಗಿ ಯುಎಇಯಲ್ಲಿ ಹಿಂದಿನ ಐಪಿಎಲ್ ಆವೃತ್ತಿಯನ್ನು ಆಯೋಜಿಸಲಾಗಿತ್ತು, ಆದರೆ 14ನೇ ಆವೃತ್ತಿಗೆ ತವರಿನಲ್ಲೇ ನಡೆಸುವ ವಿಶ್ವಾಸದಲ್ಲಿ ಬಿಸಿಸಿಐ ಇದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಧುಮಾಲ್ ಹೇಳಿದ್ದಾರೆ.
"ನಾವು ಐಪಿಎಲ್ಅನ್ನು ಭಾರತದಲ್ಲಿ ಆಯೋಜಿಸುವುದಕ್ಕೆ ಕೆಲಸ ಮಾಡುತ್ತಿದ್ದೇವೆ. ನಾವು ಶ್ರೀಮಂತ ಕ್ರಿಕೆಟ್ ಲೀಗ್ಅನ್ನು ಆಯೋಜಿಸುತ್ತೇವೆ ಎಂಬ ವಿಶ್ವಾಸವೂ ಇದೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಬದಲೀ ಸ್ಥಳದ ಬಗ್ಗೆ ಆಲೋಚನೆಯನ್ನೂ ಮಾಡಿಲ್ಲ. ಭಾರತ ಈ ಸಮಯದಲ್ಲಿ ಯುಎಇಗಿಂತಲೂ ಸುರಕ್ಷತೆಯುಳ್ಳ ಸ್ಥಳವಾಗಿದೆ. ಮುಂದೆ ಇನ್ನು ಉತ್ತಮ ರೀತಿಯಲ್ಲಿ ಸುಧಾರಿಸಿಕೊಳ್ಳಲಿದೆ ಎಂದು ನಾವು ಆಶಿಸುತ್ತಿದ್ದು, ಲೀಗ್ಅನ್ನು ಇಲ್ಲೆ ನಡೆಸಲಿದ್ದೇವೆ" ಎಂದಿದ್ದಾರೆ.