ಕರ್ನಾಟಕ

karnataka

ETV Bharat / sports

ಮುಗಿದ ಎಂಎಸ್​ಕೆ ಅವಧಿ: ಹೊಸ ರಾಷ್ಟ್ರೀಯ ಆಯ್ಕೆಗಾರರಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ - ಹೊಸ ರಾಷ್ಟ್ರೀಯ ಆಯ್ಕೆಗಾರರಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಭಾರತ ಹಿರಿಯ ಕ್ರಿಕೆಟಿಗರ ತಂಡದ ಆಯ್ಕೆಸಮಿತಿ ತಂಡದ ಮುಖ್ಯಸ್ಥರಾಗಿರುವ ಎಂಎಸ್​ಕೆ ಪ್ರಸಾದ್​ ಹಾಗೂ ಮತ್ತೊಬ್ಬ ಸದಸ್ಯರಾಗಿರುವ ಗಗನ್ ಖೋಡ ಅವರ ಅವಧಿ ಮುಗಿದಿದ್ದು ಖಾಲಿಯಾಗುವ ಅವರ ಸ್ಥಾನ ತುಂಬಲು ಬಿಸಿಸಿಐ ಅರ್ಜಿಗೆ ಅಹ್ವಾನ ನೀಡಿದೆ.

BCCI selecting comity
BCCI selecting comity

By

Published : Jan 19, 2020, 3:45 PM IST

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿಯಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

ಭಾರತ ಹಿರಿಯ ಕ್ರಿಕೆಟಿಗರ ತಂಡದ ಆಯ್ಕೆಸಮಿತಿ ತಂಡದ ಮುಖ್ಯಸ್ಥರಾಗಿರುವ ಎಂಎಸ್​ಕೆ ಪ್ರಸಾದ್​ ಹಾಗೂ ಮತ್ತೊಬ್ಬ ಸದಸ್ಯರಾಗಿರುವ ಗಗನ್ ಖೋಡ ಅವರ ಅವಧಿ ಮುಗಿದಿದ್ದು ಖಾಲಿಯಾಗುವ ಅವರ ಸ್ಥಾನ ತುಂಬಲು ಬಿಸಿಸಿಐ ಅರ್ಜಿಗೆ ಅಹ್ವಾನ ನೀಡಿದೆ.

ಬಿಸಿಸಿಐ

ಪುರುಷರ ತಂಡದ ಆಯ್ಕೆಸಮಿತಿಯಲ್ಲಿ 2 ಹುದ್ದೆಗಳ ಜೊತೆಗೆ ಸೀನಿಯರ್​ ಮಹಿಳೆಯರ ತಂಡದ ಆಯ್ಕೆಸಮಿತಿಯಲ್ಲಿ 5 ಹುದ್ದೆಗಳು, ಹಾಗೂ ಜೂನಿಯರ್​ ಮಹಿಳಾ ತಂಡದ ಆಯ್ಕೆಸಮಿತಿಯಲ್ಲಿ 2 ಹುದ್ದೆಗಳು ಖಾಲಿಯಿದೆ. ಜನವರಿ 24 ರೊಳಗೆ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ಜಾಹಿರಾತು ಪ್ರಕಟಿಸಿದೆ.

ಬಿಸಿಸಿಐ

ಭಾರತ ಸೀನಿಯರ್​ ತಂಡದ ಆಯ್ಕೆ ಸಮಿತಿ ಹುದ್ದೆಗೆ ಸೇರಬಯಸುವವರು ಭಾರತ ತಂಡದ ಪರ 7 ಟೆಸ್ಟ್​ ಪಂದ್ಯಗಳನ್ನಾಡಿರಬೇಕು ಅಥವಾ 30 ಪ್ರಥಮ ದರ್ಜೆ ಪಂದ್ಯ, ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು ಎಂದು ಸೂಚಿಸಿದೆ.

ಮದನ್​ಲಾಲ್​, ಗೌತಮ್​ ಗಂಭೀರ್​ ಹಾಗೂ ಸುಲಕ್ಷಣ ನಾಯಕ್​ ಸಂದರ್ಶನ ನಡೆಸುವಂತೆ ಕ್ರಿಕೆಟ್ ಸಲಹಾ ಸಮಿತಿ ಕೇಳಿಕೊಂಡಿದೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details